×
Ad

ಎರಡೇ ವರ್ಷದಲ್ಲಿ ಬಣ್ಣ ಬದಲಾಯಿಸಿದ ಸಾಣೂರು ಸುವರ್ಣ ಗ್ರಾಮೋದಯ ಕಟ್ಟಡ

Update: 2016-03-04 16:36 IST
ಕಳಚಿ ಬಿದ್ದ ಕಟ್ಟಡದ ಅಂಗಾಂಗಗಳು

ಕಾರ್ಕಳ : ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಸುವರ್ಣ ಗ್ರಾಮೋದಯ ಕಟ್ಟಡ ಪ್ರಸ್ತುತ ಕಳಪೆ ಕಾಮಗಾರಿಯಿಂದ ಕೂಡಿದ್ದು, ಕಟ್ಟಡದ ಅಂಗಾಂಗಗಳು ಉರುದುತ್ತಿದ್ದು ಕಟ್ಟಡದ ನಿಜ ಬಣ್ಣ ಬಯಲಾಗುತ್ತಿದೆ. ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಈ ಕಟ್ಟಡವು 2012ರ ಡಿ: 23ರಂದು ಉದ್ಘಾಟನೆಗೊಂಡಿತ್ತು. ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡುವ ದೃಷ್ಟಿಯಲ್ಲಿ ಈ ಕಟ್ಟಡದ ನಿರ್ಮಾಣವಾಗಿತ್ತಾದರೂ ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿಯಿಂದಾಗಿ ಈ ಕಟ್ಟಡ ಸಾರ್ವಜನಿಕರ ದೂರವಾಗುವ ದಿನಗಳು ದೂರವಿಲ್ಲ ಎನ್ನುವುದು ಸತ್ಯ. ಕಟ್ಟಡದ ಕಿಟಕಿಯ ಮೇಲ್ಬಾದಲ್ಲಿ ಹಾಕಲಾದ ಲಿಂಟಲ್‌ಗಳು ಹಾಗೂ ಷೇಡ್ ಒಂದರ ಹಿಂದೆ ಒಂದರಂತೆ ಉದುರ ತೊಡಗಿದೆ. ಪರಿಣಾಮ ಈ ಕಟ್ಟಡ ಮುಂದಿನ ದಿನಗಳಲ್ಲಿ ಅಪಾಯದ ಕರೆ ಗಂಟೆಯನ್ನು ಬಾರಿಸುತ್ತಿರುವುದಂತು ನಿಜ ಅಷ್ಟೊಂದು ದೊಡ್ಡ 2 ಅಂತಸ್ತಿನ ಕಟ್ಟಡ ಉರುಳಿ ಬಿದ್ದರೆ, ಸುತ್ತಮುತ್ತದ ಪ್ರದೇಶಕ್ಕೂ ಆಪತ್ತು ಮತ್ತು ಜೀವ ಹಾನಿ ಕಟ್ಟಿಟ್ಟ ಬುತ್ತಿ.

ನಿರ್ಮಿತಿ ಕೇಂದ್ರದ ಕಾಮಗಾರಿ :
  ನಿರ್ಮಿತಿ ಕೇಂದ್ರದಿಂದ ನಿರ್ಮಾಣಗೊಂಡ ಕಟ್ಟಡ ಇದು ಅಕ್ಷರಶಃ ಕಳಪೆ ಕಾಮಗಾರಿ ಯಾವುದೇ ಟೆಂಡರ್ ಆಹ್ವಾನಿಸದೆ ಸ್ಥಳೀಯ ಗುತ್ತಿಗೆದಾರರ ಲಾಭಿಗೆ ಮಣಿದು ಈ ಕಟ್ಟಡವನ್ನು ನಿರ್ಮಿಸಲಾಗಿದ್ದು. ನಿರ್ಮಿತಿ ಕೇಂದ್ರದ ಮೇಲು ಯಸ್ತುವಾರಿ ಈ ಕಟ್ಟಡ ನಿರ್ಮಾಣಗೊಂಡಿದ್ದರೂ, ಇದನ್ನು ನಿರ್ಮಿಸಿದವರು ಸ್ಥಳೀಯ ಗುತ್ತಿಗೆದಾರರು. ಜತೆಗೆ ಈ ಅನುದಾನ ಪೂರ್ಣವಾಗಿ ಬಳಕೆಯಾಗದೆ, ಕೇವಲ ನಾಮಕಾವಸ್ಥೆಗೆ ಈ ಕಾಮಗಾರಿ ನಡೆದಿದೆ ಎನ್ನುವುದು ಬಹೀರಂಗವಾಗಿದೆ. ಸರಕಾರದ ನಿಯಮಾವಳಿ ಪ್ರಕಾರ, ಟೆಂಡರ್ ಆಹ್ವಾನಿಸಿದ ಬಳಿಕ ಯಾರೂ ಗುತ್ತಿಗೆದಾರರು ಮುಂದೆ ಬಾರದಿದ್ದಲ್ಲಿ ಅದನ್ನು ನಿರ್ವಹಿಸುವ ಕೆಲಸ ನಿರ್ಮಿತಿ ಕೇಂದ್ರಕ್ಕೆ ನೀಡಬೇಕು. ಆದರೆ ಇಲ್ಲಿ ಎಲ್ಲವೂ ಬೋಗಸ್. ಕಾರಣ ಟೆಂಡರ್ ಆಹ್ವಾನಿಸದೆ ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿಕೊಡುವ ಮೂಲಕ ನಿರ್ಮಿತಿ ಕೇಂದ್ರವು ಅವ್ಯವಹಾರ ಎಸಗಿದೆ.ರಾಜಕೀಯ ಪ್ರೇರಿತವಾಗಿ ಗುತ್ತಿಗೆಯನ್ನು ನೀಡಲಾಗಿದೆ,ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲೇ ಅವ್ಯವಹಾರ ?:

ಜಿಲ್ಲಾಧಿಕಾರಿಗಳ ಕೈಕೆಳಗೆ ನಿರ್ಮಿತಿ ಕೇಂದ್ರ ಎನ್ನುವ ಸಂಸ್ಥೆಯಿದೆ. ಆದರೆ ಈ ನಿರ್ಮಿತಿ ಕೇಂದ್ರ ತನ್ನ ವ್ಯಾಪ್ತಿ ಮೀರಿ ಕೆಲಸ ನಿರ್ವಹಿಸುತ್ತಿದೆ. ಅವುಗಳ ಪೈಕಿ ಬಹುತೇಕ ಕಾಮಗಾರಿಗಳು ಕಳಪೆ.
ಸ್ಥಳೀಯ ಜನಪ್ರತಿನಿಧಿಗಳಿಗೂ ಇದೇ ಹೆಚ್ಚು ಪ್ರೀತಿ. ಯಾಕೆಂದರೆ ಇಲ್ಲಿ ಟೆಂಡರ್ ಅವಶ್ಯಕತೆಯಿಲ್ಲ. ಬದಲಿಗೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ಜತೆ ಸ್ನೇಹ ಬೆಳೆಸಿ ತ ಮಗೆ ಬೇಕಾದ ಗುತ್ತಿಗೆದಾರರಿಗೆ ಈ ಕೆಲಸ ವಹಿಸಿಕೊಡುವ ಅವಕಾಶ ಜನಪ್ರತಿನಿಧಿಗಿದೆ. ಉಡುಪಿ ಜಿಲ್ಲೆಯಲ್ಲಿ ನಿರ್ಮಿತಿಕೇಂದ್ರದ ಜತೆಗೂಡಿ ಅನೇಕ ಜನಪ್ರತಿನಿಧಿಗಳು ಬಾರೀ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಜತೆಗೆ ನಿರ್ಮಿತಿಕೇಂದ್ರದಿಂದ ನಿರ್ಮಾಣವಾದ ಬಹುತೇಕ ಕಾಮಗಾರಿಗಳು ಕಳಪೆ ಎನ್ನುವುದು ವಾಸ್ತವ. ಅದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದೆ, ಮತ್ತದೇ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡುವುದು ವಿಪರ್ಯಾಸ, ಎಂದು ಜನರಾಡಿಕೊಳ್ಳತ್ತಿದ್ದಾರೆ.

ಕಳಪೆ ಕಾಮಗಾರಿ :

ಕಾಮಗಾರಿ ಕಳಪೆ ಕಾಮಗಾರಿಯಾಗಿದೆ. ನಿರ್ಮಾಣಗೊಂಡು ಎರಡೇ ವರ್ಷದಲ್ಲಿ ಬೀಳಲಾರಂಭಿಸಿದೆ. ಈ ಬಗ್ಗೆ ಹೆಚ್ಚು ನನಗೆ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಪಕ್ಕ ಕಳಪೆ ಎನ್ನುವುದು ಸ್ಪಷ್ಟ ಎನ್ನುತ್ತಾರೆ ಸಾಣೂರು ಗ್ರಾ.ಪಂ.ಅಧ್ಯಕ್ಷೆ ಅಕ್ಷತಾ ಶೆಟ್ಟಿ.

ನಿರ್ಮಿತಿ ಕೇಂದ್ರದ ಕಾಮಗಾರಿ :

ನಿರ್ಮಿತಿ ಕೇಂದ್ರದ ಕಾಮಗಾರಿ. ಕಟ್ಟಡ ಬೀಳಲು ಸಾಧ್ಯವಿಲ್ಲ. ಇದು ಗ್ರಾ.ಪಂ.ನ ಸುಪರ್ದಿಯಲ್ಲಿದ್ದರೂ, ಆ ಕಟ್ಟಡದ ಬಗ್ಗೆ ನನಗೇನು ಗೊತ್ತಿಲ್ಲ. ಅದು ತನ್ನಿಂದ ತಾನಾಗಿಯೇ ಬಿದ್ದಿರಬಹುವುದು. ಆದರೆ ಕಳಪೆ ಎಂದು ಹೇಳಲು ಬರುವುದಿಲ್ಲ ಎನ್ನುತ್ತಾರೆ ಸಾಣೂರು ಗ್ರಾ.ಪಂ.ಪಿಡಿಒ ಸವಿತಾ.

ಗಮನಕ್ಕೆ ಬಂದಿಲ್ಲ: 

ಕಟ್ಟಡ ನಿರ್ಮಾಣ ಮಾಡಿದ ನಿರ್ಮಿತಿಕೇಂದ್ರದ ಇಂಜಿನಿಯರ್‌ಗೆ ನೋಟೀಸ್ ಜಾರಿ ಮಾಡಲಾಗುವುದು. ಅದಕ್ಕೆ ನೇರ ಹೊಣೆಗಾರರು ಉಡುಪಿ ಜಿಲ್ಲಾಧಿಕಾರಿಗಳು ಎನ್ನುತ್ತಾರೆ ಸಾಣೂರು ಮಾಜಿ ಅಧ್ಯಕ್ಷ ನರಸಿಂಹ ಕಾಮತ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News