ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಅನುವಂಶಿಕ ಸೇವೆಗಳ ಕೇಂದ್ರ ಉದ್ಘಾಟನೆ
Update: 2016-03-04 17:02 IST
ಉಳ್ಳಾಲ: ಅನುವಂಶಿಕ ಅಸ್ವಸ್ಥೆಗಳು ರೋಗಗಳಿಗೆ ದಾರಿಯಾಗಿದ್ದು, ಅದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಸಮುದಾಯ ಸೇವೆ ಕಡೆಗೆ ಹೆಚ್ಚಿನ ಒಲವು ನೀಡುವ ಸಲುವಾಗಿ ಆರಂಭಗೊಂಡಿರುವ ಸೇವಾ ಕೇಂದ್ರದ ಸ್ಥಾಪನೆ ಶ್ಲಾಘನೀಯ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಹೇಳಿದ್ದಾರೆ. ಅವರು ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಅನುವಂಶಿಕ ಸೇವೆಗಳ ಕೇಂದ್ರ ವನ್ನು ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭ ಮಕ್ಕಳ ವಿಭಾಗ ಮುಖ್ಯಸ್ಥೆ ಡಾ.ರತಿಕಾ ಶೆಣೈ ಉಪಸ್ಥಿತರಿದ್ದರು. ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಡಾ.ಸ್ವಾತಿ ರಾವ್ ನಿರ್ವಹಿಸಿದರು. ಡಾ.ಶಿಪ್ರಾ ಸೊಂಕುಸಾರೆ ವಂದಿಸಿದರು.