ಕಡಬ: ಏಮ್ಸ್ ಕಾಲೇಜಿನಲ್ಲಿ ’ಅರಿವು’ ಮಾಹಿತಿ ಕಾರ್ಯಾಗಾರ
Update: 2016-03-04 17:54 IST
ಕಡಬ, ಮಾ.4. ಅರಿವು ಯುವ ಸಂವಾದ ಕೇಂದ್ರ ಬಂಟ್ವಾಳ, ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸಮಾಜಕಾರ್ಯ ವಿಭಾಗ ಹಾಗೂ ಕಡಬ ಏಮ್ಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ’ಹೋಲ್ಡ್‌ಆನ್’ ಎಂಬ ವಿಶೇಷ ಅರಿವು ಕಾರ್ಯಕ್ರಮವು ಕಡಬ ಏಮ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರದಂದು ನಡೆಯಿತು.
ಬಂಟ್ವಾಳ ಅರಿವು ಯುವ ಸಂವಾದ ಕೇಂದ್ರದ ಸಂಚಾಲಕರಾದ ನಾದ ಮಣಿನಾಲ್ಕೂರು, ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮೀನಾ ಕುಮಾರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯುವ ಮನಸ್ಸಿನ ತೊಳಲಾಟ, ಮದುವೆ ಹಾಗೂ ಶಿಕ್ಷಣದ ಅವಶ್ಯಕತೆಗಳ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.