×
Ad

ಧನ್ಯಾ ಅತ್ತರೂ, ನಕ್ಕರೂ ಎಲುಬು ಮುರಿಯುತ್ತದೆ: ಅಪೂರ್ವ ರೋಗಬಾಧಿಸಿದ ಯುವತಿ

Update: 2016-03-04 17:58 IST

ತಿರುವನಂತಪುರಂ,ಮಾರ್ಚ್.4: ಮುಟ್ಟಿದರೆ ಧನ್ಯಾರ ಎಲುಬು ಮುರಿಯುತ್ತದೆ. ಆದರೆ ಇದರಿಂದ ತನ್ನ ಜೀವನವೇ ಮುಗಿಯಿತೆಂದು ಇಪ್ಪತ್ತೇಳು ವರ್ಷದ ಯುವತಿ ಭಾವಿಸಿಲ್ಲ. ಆಸ್ಟಿಯೊಜನಸಿಸ್ ಇಂಫರ್‌ಪೆಕ್ಟ್ ಎಂಬ ಅತ್ಯಪೂರ್ವ ರೋಗಕ್ಕೆ ಗುರಿಯಾದ ಕೇರಳ ಮೂಲದ ಯುವತಿ ಧನ್ಯಾಳ ದೇಹ ಗಾಜಿನ ಪಾತ್ರೆಯಂತೆ ಮುರಿದು ಬಿಡುತ್ತದೆ. ಭಾರತದ ಗ್ಲಾಸ್ ವುಮೆನ್ ಎಂದು ಆಕೆಯನ್ನು ಕರೆಯಲಾಗುತ್ತಿದೆ.

ಈ ವರೆಗೆ ಮುನ್ನೂರು ಬಾರಿ ಧನ್ಯಾರ ಎಲುಬುಗಳು ಮುರಿದಿವೆ. ಮಂಚದಿಂದ ಬೆಳಗ್ಗೆ ಏಳುವಾಗ ಗೊತ್ತಿಲ್ಲದೆ ಸ್ವಲ್ಪ ಕೈಗೆ ಶಕ್ತಿಹಾಕಿದರೂ ಎಲುಬು ಮುರಿಯುತ್ತವೆ. ಅಷ್ಟೇಕೆ ಗಟ್ಟಿಯಾಗಿ ಅತ್ತರೂ ಕೈ ಬಡಿದರೂ ಆಸ್ಪತ್ರೆಗೆ ಹೋಗಬೇಕು. ಕೆಲವೊಮ್ಮೆ ತನ್ನ ಎಲುಬು ತುಂಡರಿಸಿದರೆ ಅದು ಅಮ್ಮ ನೋಡದಂತೆ ಅಡಗಿಸಿಡುತ್ತೇನೆ ಎಂದು ಧನ್ಯ ಹೇಳುತ್ತಾರೆ. ನೋವಿನಿಂದ ನಾನು ಅಳುತ್ತೇನೆ ಅದರೊಂದಿಗೆ ಅಮ್ಮ ಕೂಡಾ ಅಳುತ್ತಾರೆ ಇದು ನನಗೆ ತುಂಬ ನೋವು ನೀಡುತ್ತದೆ ಎಂದುಧನ್ಯಾ ಹೇಳುತ್ತಾರೆ. ಆದ್ದರಿಂದ ಎಷ್ಟೆ ನೋವು ಆದರೂ ನಾನು ಮುಗುಳ್ನಗುವೆ. ಜೀವನ ವ್ಹೀಲ್ ಚೇರ್‌ಗೆ ಸೀಮಿತವಾದರೂ ಇರುವಷ್ಟು ಕಾಲ ನಗು ನಗುತ್ತಾಬದುಕಲು ಧನ್ಯಾ ಯಸುತ್ತಾರೆ.

 ಇತರರಂತೆ ಓಡಾಡಲು ಜೀವನವನ್ನು ಆಸ್ವಾದಿಸಲು ಸಾಧ್ಯವಾಗಿಲ್ಲವಲ್ಲ ಎಂಬ ಸಂಕಟದೊಂದಿಗೆ ಧನ್ಯಾ ಬೆಳೆದರು. ಯಾವುದೋ ಅನ್ಯಗ್ರಹದ ಜೀವಿಬದುಕಿರುವಂತೆ ಜನರು ನನ್ನನ್ನು ನೋಡುತ್ತಾರೆ. ಎಲುಬುಗಳು ಮುರಿಯುವುದು ಮಾತ್ರವಲ್ಲ ಇತರ ಅವಯವಗಳ ಬೆಳವಣಿಗೆಗೂ ಅದು ಮಾರಕವಾಗಿ ಬಾಧಕವಾಗುತ್ತದೆ. ಅಪ್ಪ ಅಮ್ಮನ ಸಹಾಯವಿಲ್ಲದೆ ಧನ್ಯರಿಗೆ ಎಲ್ಲಿಗೂ ಹೋಗಲು ಸಾಧ್ಯವಾಗುವುದಿಲ್ಲ. ಎರಡು ವರ್ಷದ ಮಗುವಾಗಿದ್ದಾಗ ಧನ್ಯಾರ ರೋಗವನ್ನು ಪತ್ತೆಹಚ್ಚಲಾಗಿತ್ತು. ಮಗು ಅತ್ತಾಗಲೆಲ್ಲ ಅವಳನ್ನು ಹೆತ್ತವರು ಆಸ್ಪತ್ರೆಗೆ ಕರೆದು ಕೊಂಡುಹೋಗುತ್ತಿದ್ದರು. ಆಗ ಎಲುಬು ಮುರಿದಿರುವ ವಿಷಯ ಗೊತ್ತಾಗುತ್ತಿತ್ತು. ಆ ನಂತರ ಅವಳ ಬದುಕು ವ್ಹೀಲ್ ಚೇರ್‌ಗೆ ಸೇರಿಹೋಯಿತು. ತನ್ನ ವ್ಹೀಲ್ ಚೇರ್‌ನ್ನು ಧನ್ಯಾ ಬಿಎಂಡಬ್ಲ್ಯೂ ಎಂದು ಧನ್ಯ ಕರೆಯುತ್ತಾರೆ. ಜೀವನವನ್ನು ಧನಾತ್ಮಕವಾಗಿ ನೋಡಲು ಧನ್ಯಾ ಇಷ್ಟರಲ್ಲೇ ಕಲಿತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News