×
Ad

ಉಳ್ಳಾಲ: ಬೀಳ್ಕೊಡುಗೆ ಸಮಾರಂಭ

Update: 2016-03-04 18:15 IST

ಉಳ್ಳಾಲ. ಮಾ, 04: ಮಕ್ಕಳನ್ನು ಶಿಕ್ಷಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ,ಶಾಲೆಯನ್ನು ಮಾದರಿ ಶಾಲೆಯಾಗಿ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರವೇ ಮಹತ್ವದ್ದು ಎಂದು ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.

ಅವರು ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ಕಲ್ಲರಕೋಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು ಇಪ್ಪತ್ತು ವರುಷ ಸೇವೆಗೈದು ಶಾಲೆಯ ಅಭಿವೃದ್ಧಿಗೆ ಕಾರಣರಾದ ಹಿರಿಯ ಅಧ್ಯಾಪಕ ಮಹಮ್ಮದ್ ಐ ಅವರು ಮಂಚಿ ಶಾಲೆಗೆ ವರ್ಗಾವಣೆಗೊಂಡಿದ್ದು ,ಶಾಲಾ ಮೇಲುಸ್ತುವಾರಿ ಸಮಿತಿಯಿಂದ ನಡೆದ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬದಲಾವಣೆಯು ಜಗದ ನಿಯಮವಾಗಿದ್ದು ,ಮಹಮ್ಮದ್ ಅವರಿಂದ ಇನ್ನೊಂದು ಶಾಲಾ ಅಭಿವೃದ್ಧಿಯಾಗುವುದು ದೈವೇಚ್ಚೆಯಾಗಿರುವುದರಿಂದ ಅವರು ವರ್ಗಾವಣೆಗೊಂಡಿದ್ದಾರೆ.ಕಲ್ಲರಕೋಡಿ ಶಾಲಾಭಿವೃದ್ಧಿಗೆ ಅನುದಾನ ನೀಡಲು ತನ್ನ ಅಧಿಕಾರಾವಧಿಯಲ್ಲಿ ಶಿಕ್ಷಕರು ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಹಗಲು ರಾತ್ರಿ ಎನ್ನದೆ ದಂಬಾಲು ಬಿದ್ದ ಪರಿಣಾಮ ಶಾಲೆಗೆ ಸುಸಜ್ಜಿತ ರಂಗಮಂದಿರ ಮತ್ತು ಆಟದ ಮೈದಾನವನ್ನು ಒದಗಿಸುವಂತಾಯಿತು ಎಂದು ಹೇಳಿದರು.

 ಕುರ್ನಾಡು ಜಿ.ಪಂ ಕ್ಷೇತ್ರದ ನೂತನ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ಮಾತನಾಡಿ ತಾನು ಚುನಾವಣೆಯಲ್ಲಿ ಗೆದ್ದ ನಂತರ ಜ್ನಾನಾರ್ಜನೆಯ ದೇಗುಲದಲ್ಲೇ ಪ್ರಥಮ ಕಾರ್ಯಕ್ರಮ ಲಭಿಸಿದ್ದು ಸಂತಸ ತಂದಿದ್ದು ತನ್ನ ಅಧಿಕಾರಾವಧಿಯ ಮುಂದಿನ ದಿವಸಗಳಲ್ಲಿ ಈ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು.

ಮಾಜಿ ಜಿ.ಪಂ ಸದಸ್ಯ ಸಂತೋಷ್ ಬೋಳಿಯಾರ್ ಮತ್ತು ನೂತನ ಜಿ.ಪಂ ಸದಸ್ಯೆ ಮಮತಾ ಡಿ ಎಸ್ ಗಟ್ಟಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾ.ಪಂ ಸದಸ್ಯ ಹೈದರ್ ಕೈರಂಗಳ,ನರಿಂಗಾನ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ,ಉಪಾಧ್ಯಕ್ಷೆ ನಳಿನಾಕ್ಷಿ ,ಮಾಜಿ ಅಧ್ಯಕ್ಷರಾದ ಸಿದ್ಧೀಕ್ ಪಾರೆ,ಶೇಖಬ್ಬ,ಗ್ರಾ.ಪಂ ಸದಸ್ಯರಾದ ಸುಜಾತ,ಮುರಳೀಧರ ಶೆಟ್ಟಿ ಮೋರ್ಳ,ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್,ಸದಸ್ಯರಾದ ಪ್ರೇಮಾನಂದ ರೈ,ಶಾಲಾ ಹಳೇ ವಿದ್ಯಾರ್ಥಿ ನವಾರ್ ,ಶಾಲಾ ಮುಖೋಪಾಧ್ಯಾಯಿನಿ ಶೀಲಾವತಿ,ಶಿಕ್ಷಕರಾದ ಬಿ.ಕೆ ವಸಂತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News