×
Ad

ರಾಜಕೀಯ ಬೇಡ: ಕನ್ಹಯ್ಯಗೆ ಕೇಂದ್ರ ಸರಕಾರದ ಎಚ್ಚರಿಕೆ

Update: 2016-03-04 18:50 IST

ಹೊಸದಿಲ್ಲಿ , ಮಾ. 4: ಜೈಲಿಂದ ಬಿಡುಗಡೆಯಾಗಿ ಅಪಾರ ಜನಪ್ರಿಯತೆ ಪಡೆದಿರುವ ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಗೆ ಪರೋಕ್ಷ ಎಚ್ಚರಿಕೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ರಾಜಕೀಯ ಬಿಟ್ಟು ಅಧ್ಯಯನದತ್ತ ಗಮನ ಹರಿಸುವುದು ಸೂಕ್ತ ಎಂದು ಹೇಳಿದ್ದಾರೆ. ಕನ್ಹಯ್ಯ ಪ್ರಚಾರದ ಹಿಂದೆ ಹೋಗುವ ಬದಲು ವಿವಿಯಲ್ಲಿ ಆ ರೀತಿಯ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟವರಿಗೆ ಸಹಕರಿಸಲಿ ಎಂದು ಅವರು ಹೇಳಿದ್ದಾರೆ. 

" ಅವರು ಪ್ರಚಾರದ ಹಿಂದೆ ಇದ್ದಾರೆ. ಆ ಘೋಷಣೆಗಳನ್ನು ಖಂಡಿಸಿ ಅವರು ಅದರಿಂದ ದೂರ ಸರಿಯಬೇಕು ಹಾಗು ವಿವಿ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದರೆ ಅಧ್ಯಯನ ಕೈ ಬಿಟ್ಟು  ಅದಕ್ಕೇ ಸೇರಲಿ. ಅವರ ನೆಚ್ಚಿನ ಪಕ್ಷ ಈಗ ಸಂಸತ್ತಿನಲ್ಲಿ ಏಕ ಅಂಕಿಯಲ್ಲಿದೆ. ಅದನ್ನೇ ಸೇರಲಿ. ಅದು ಬಿಟ್ಟು ವಿದ್ಯಾರ್ಥಿಯ ವೇಷದಲ್ಲಿ ಅಫ಼್ಝಲ್ ಗುರು , ಯಾಕುಬ್ ಮೆಮನ್ ಹಾಗು ಮಕ್ಬೂಲ್ ಭಟ್ ಅವರಿಗೆ ಬೆಂಬಲ ನೀಡುವುದು ಬೇಡ " ಎಂದು ಎಡಪಕ್ಷಗಳ ಹೆಸರು ನೇರವಾಗಿ ಹೇಳದೆ ವೆಂಕಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News