×
Ad

ಯಮನ್: ನಾಲ್ವರು ಭಾರತೀಯ ನನ್‌ಗಳ ಹತ್ಯೆ

Update: 2016-03-04 19:53 IST

ಸನಾ (ಯೆಮನ್), ಮಾ. 5: ಯಮನ್‌ನಲ್ಲಿ ನಿವೃತ್ತರು ವಾಸಿಸುವ ಮನೆಯೊಂದರ ಮೇಲೆ ಶುಕ್ರವಾರ ನಡೆದ ಭಯೋತ್ಪಾದಕ ದಾಳಿಯೊಂದರಲ್ಲಿ 16 ಮಂದಿ ಮೃತಪಟ್ಟಿದ್ದು, ಆ ಪೈಕಿ ನಾಲ್ವರು ಭಾರತೀಯ ನನ್ (ಕ್ರೈಸ್ತ ಭಗಿನಿಯರು) ಗಳಾಗಿದ್ದಾರೆ.ದಕ್ಷಿಣದ ನಗರ ಏಡನ್‌ನಲ್ಲಿರುವ ಮನೆಗೆ ಮಧ್ಯಾಹ್ನ ಸುಮಾರು 12.30ಕ್ಕೆ ಬಂದೂಕುಧಾರಿಯೊಬ್ಬ ನುಗ್ಗಿ ನಿವಾಸಿಗಳ ಮೇಲೆ ಗುಂಡಿನ ಮಳೆ ಸುರಿಸಿದನು ಎಂದು ಯಮನ್‌ನ ಭದ್ರತಾ ಅಧಿಕಾರಿಗಳು ಹೇಳಿದರು.ಇಬ್ಬರಿಂದ ನಾಲ್ಕರಷ್ಟಿದ್ದ ಭಯೋತ್ಪಾದಕರು ಮನೆಯ ಕಾವಲುಗಾರನನ್ನು ಸಂಪರ್ಕಿಸಿ, ತಮ್ಮ ತಾಯಂದಿರನ್ನು ನೋಡಬೇಕಾಗಿದೆ ಎಂದು ಹೇಳಿದರು ಎಂದು ವಿದೇಶ ಸಚಿವಾಲಯ ತಿಳಿಸಿದೆ.ಒಳಗೆ ಪ್ರವೇಶಿಸುತ್ತಲೇ ಅವರು ಕಾವಲುಗಾರನನ್ನು ಗುಂಡಿಕ್ಕಿ ಕೊಂದರು ಹಾಗೂ ಮನೆಯಲ್ಲಿದ್ದವರ ಮೇಲೆ ಗುಂಡುಹಾರಿಸಿದರು.ಭಯೋತ್ಪಾದಕರು ನನ್‌ಗಳನ್ನು ಇತರರಿಂದ ಬೇರ್ಪಡಿಸಿ ಅವರಿಗೆ ಬೇಡಿ ತೊಡಿಸಿ ಗುಂಡು ಹಾರಿಸಿದರು ಎಂದು ವರದಿಗಳು ತಿಳಿಸಿವೆ.ಈ ನನ್‌ಗಳು ಮದರ್ ತೆರೇಸಾ ಸ್ಥಾಪಿಸಿದ ‘ಮಿಶನರೀಸ್ ಆಫ್ ಚಾರಿಟಿ’ಗೆ ಸೇರಿದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News