×
Ad

ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದವರಿಗೆ ವೀಸಾ ನೀಡಲು ನಿರಾಕರಿಸಿದ ಮೋದಿ ಸರಕಾರ

Update: 2016-03-04 20:07 IST

ವಾಷಿಂಗ್ಟನ್,ಮಾರ್ಚ್.4: ಅಮೆರಿಕಾದ ಕಮಿಶನ್ ಆಫ್ ಇಂಟರ್‌ನ್ಯಾಶನಲ್ ರಿಲೀಜಸ್ ಫ್ರೀಡಂ(ಯುಎಸ್ಸಿಐಆರ್‌ಎಫ್)ಭಾರತ ಪ್ರವಾಸಕ್ಕೆ ವೀಸಾ ನೀಡಲು ನಿರಾಕರಿಸಿರುವ ಭಾರತ ಸರಕಾರದ ಕ್ರಮಕ್ಕೆ ಅದು ನಿರಾಸೆ ವ್ಯಕ್ತಪಡಿಸಿದೆ. ಈ ಸಂಸ್ಥೆಯು ವಿದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯಗಳ ಮೇಲೆ ನಿಗಾವಿರಿಸುತ್ತದೆ. ಸಂಸ್ಥೆಯ ಭಾರತ ಪ್ರವಾಸ ತುಂಬ ಹಿಂದೆಯೇ ಹಾಕಿರುವ ಯೋಜನೆಯಾಗಿದೆ ಮತ್ತು ಅಯೋಗವು ಜನರಲ್ಲಿ ಮಾತುಕತೆಯಾಡುವುದು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯನ್ನು ಅವಲೋಕನ ನಡೆಸುವುದು ಉದ್ದೇಶವಾಗಿದೆ ಎಂದು ತಿಳಿಸಿತ್ತು.

ಯುಎಸ್ಸಿಐಆರ್‌ಎಫ್ ಅಧ್ಯಕ್ಷ ರಾಬರ್ಟ್ ಪಿ.ಜಾರ್ಜ್ ಹೇಳಿಕೆಯೊಂದರಲ್ಲಿ" ಭಾರತ ಸರಕಾರ ವೀಸಾ ನಿರಾಕರಿಸಿದ್ದರಿಂದನಮಗೆ ತುಂಬ ನಿರಾಸೆಯಾಗಿದೆ. ಒಂದು ಬಹು ಜನಾಂಗೀಯ ಜಾತ್ಯತೀತ ಪ್ರಜಾಪ್ರಭುತ್ವ ದೇಶವಾಗಿರುವುದರಿಂದ ಮತ್ತು ಅಮೇರಿಕದ ನಿಕಟ ರಾಷ್ಟ್ರವಾದ್ದರಿಂದ ಭಾರತ ನಮ್ಮ ಪ್ರವಾಸಕ್ಕೆ ಅನುಮತಿ ನೀಡುವ ವಿಶ್ವಾಸೊಂದಬೇಕಿತ್ತು" ಎಂದು ಹೇಳಿದ್ದಾರೆ.

ಯುಎಸ್ಸಿಐಆರ್‌ಎಫ್ ಪಾಕಿಸ್ತಾನ, ಸೌದಿ ಅರೆಬಿಯ , ವಿಯಟ್ನಂ,ಚೀನ ಮತ್ತು ಬರ್ಮಾಸಹಿತ ಅನೇಕ ದೇಶಗಳ ಪ್ರವಾಸ ಮಾಡಿದ್ದು ಅಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸರ್ವಾಧಿಕ ಉಲ್ಲಂಘನೆ ನಡೆಯುತ್ತಿದೆ ಎಂದು ಅದು ತಿಳಿಸಿದೆ. ಇದರ ಪ್ರತಿನಿಧಿಗಳು ಮಾರ್ಚ್ ನಾಲ್ಕಕ್ಕೆ ಭಾರತಕ್ಕೆ ಬರಬೇಕಿತ್ತು. ಅಮೆರಿಕ ವಿದೇಶ ಸಚಿವಾಲಯ ಮತ್ತು ಭಾರತದಲ್ಲಿ ಅಮೆರಕನ್ ರಾಯಭಾರಿ ಕಚೇರಿಯ ಬೆಂಬಲವಿತ್ತು. ಆದರೆ ಭಾರತ ಸರಕಾರ ನೀಡಿಲ್ಲ. ಜಾರ್ಜ್ ಅವರು ಭಾರತ ಭೇಟಿಯ ಪ್ರಯತ್ನ ಮುಂದುವರಿಸಲಾಗುವುದು ಮತ್ತು 2014ರಿಂದ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಹೆಚ್ಚು ಕೆಟ್ಟಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News