×
Ad

8ರಿಂದ ರಾಜ್ಯಮಟ್ಟದ ಯುವಜನ ಮೇಳ

Update: 2016-03-04 23:56 IST

ಮಂಗಳೂರು, ಮಾ.4: 2014-15ನೆ ಸಾಲಿನ ರಾಜ್ಯ ಮಟ್ಟದ ಯುವಜನ ಮೇಳ ಹಾಗೂ 2013-14ನೆ ಸಾಲಿನ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.8ರಿಂದ 10ರವರೆಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ನಡೆಯಲಿದೆ.
ದ.ಕ. ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವಜನ ಒಕ್ಕೂಟ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಪಡುಮಾರ್ನಾಡು ಯುವಕ ಸಂಘದ ಸಂಯುಕ್ತ ಆಶ್ರಯ ದಲ್ಲಿ ಈ ಮೇಳ ನಡೆಯಲಿದೆ.
2014-15ನೆ ಸಾಲಿನ ವಿವಿಧ ವಿಭಾಗ ಮಟ್ಟದ ಯುವಜನ ಮೇಳ ಗಳ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವ ಸುಮಾರು 1,000 ಯುವಕ -ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಅರ್ಹ ಸ್ಪರ್ಧಾಳುಗಳು ಫೆ.8ರಂದು ಪೂರ್ವಾಹ್ನ 11ಕ್ಕೆ ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಹಾಜರಿರುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News