ಅಮಾನತಾದ ಫುಟ್ಬಾಲ್ ಆಟಗಾರ ಲೂಯಿಸ್ ಸುರೇಝ್ ತಂಡಕ್ಕೆ ಸೇರ್ಪಡೆ
Update: 2016-03-05 12:41 IST
ಉರುಗ್ವೆ: ಉರುಗ್ವೆ ಫುಟ್ಬಾಲ್ ತಂಡದ ಸ್ಟ್ರೈಕರ್ ಲೂಯಿಸ್ ಸುರೇಝ್ ಮತ್ತೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 2014ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ತನ್ನ ಎದುರಾಳಿ ಇಟಲಿಯ ಜಾರ್ಜಿಯೊ ಚಿಲ್ಲಿನಿ ಅವರನ್ನು ಕಚ್ಚಿ ಗಾಯಗೊಳಿಸಿದ್ದಕ್ಕಾಗಿ ಇವರನ್ನು 9 ಆಟಗಳಿಂದ ಅಮಾನತುಗೊಳಿಸಲಾಗಿತ್ತು.
ಮಾರ್ಚ್ 25ರಂದು ನಡೆಯಲಿರುವ ಬ್ರೆಝಿಲ್ ಮತ್ತು ಪೆರು ತಂಡಗಳ ನಡುವಿನ ಪಂದ್ಯದಲ್ಲಿ ಪಾಲ್ಗೊಳ್ಳಲು ಫುಟ್ಬಾಲ್ ಸಂಸ್ಥೆ ಶುಕ್ರವಾರ ಆಹ್ವಾನ ನೀಡಿದೆ.
ಆಸ್ಕರ್ ಟಬಾರೆಝ್ ತಂಡದ 28 ಮಂದಿ ಆಟಗಾರರಲ್ಲಿ ಲೂಯಿಸ್ ಒಬ್ಬರಾಗಿರುತ್ತಾರೆಂದು ಸಂಸ್ಥೆ ತಿಳಿಸಿದೆ.