×
Ad

ನಾಯಕನಿಗೆ ನೆಹರೂರವರಂತೆ ಮಾನಸಿಕ ದೃಢತೆಯಿರಬೇಕು : ಮೋದಿಗೆ ಶೌರಿಯ ವಾಗ್ಬಾಣ

Update: 2016-03-05 16:16 IST

ಜೈಪುರ್: ದುರ್ಬಲ ಜನರನ್ನು ತಮ್ಮ ಸುತ್ತವಿರಿಸಿಕೊಂಡು ಭಟ್ಟಂಗಿಗಳನ್ನು ಉತ್ತೇಜಿಸುತ್ತಿರುವ ಮಾನಸಿಕವಾಗಿ ಅಭದ್ರ ನಾಯಕನೆಂದು ತಮ್ಮನ್ನು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿರಿಯ ಪತ್ರಕರ್ತ ಹಾಗೂ ಮಾಜಿ ಬಿಜೆಪಿ ಸಚಿವ ಅರುಣ್ ಶೌರಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನೆಹರೂರವರನ್ನು ತೆಗಳುವುದು ಫ್ಯಾಶನ್ ಆಗಿ ಬಿಟ್ಟಿದ್ದರೂ, ಸಂಪುಟದಲ್ಲಿ ಪ್ರಬಲ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ ‘ಮಾನಸಿಕ ದೃಢತೆ’ಯುಳ್ಳ ನಾಯಕರು ಅವರಾಗಿದ್ದರು ಎಂದು ಶೌರಿ ಶನಿವಾರ ನಗರದಲ್ಲಿ ರಾಜಸ್ಥಾನ ಪತ್ರಿಕಾ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಭಾಗವಹಿಸುತ್ತಾ ಹೇಳಿದರು.

‘‘ಓರ್ವ ನಾಯಕ ಮಾನಸಿಕವಾಗಿ ಭದ್ರತೆಯ ಭಾವನೆಯನ್ನು ಹೊಂದಿದವನಾಗಿರಬೇಕು. ಆದರೆ ಆತ ಪರಿಣತರು ಅಥವಾ ಶ್ರೇಷ್ಠರಿಂದ ತನಗೆಬೆದರಿಕೆಯಿದೆಯೆಂದು ತಿಳಿದಲ್ಲಿ ಆತನಿಗೆ ಅತ್ಯುತ್ತಮ ತಂಡವೊಂದನ್ನು ಹೊಂದುವುದು ಸಾಧ್ಯವಿಲ್ಲ,’’ಎಂದು ಮೋದಿಯವರನ್ನು ಉಲ್ಲೇಖಿಸದೆ ಶೌರಿ ಹೇಳಿದರು.

ಸರಕಾರದ ಪ್ರತಿನಿಧಿಯಂತೆ ಕಾರ್ಯ ನಿರ್ವಹಿಸಿ ತಾನು ಹೊಂದಿದ ಉನ್ನತ ಹುದ್ದೆಯ ಘನತೆಗೆ ಧಕ್ಕೆ ತಂದ ಹಾಗೂ ಇದೀಗ ಮಾಜಿಯಾಗಿರುವ ದಿಲ್ಲಿಪೋಲಿಸ್ ಕಮಿಷನರ್ ಅವರನ್ನೂ ಶೌರಿ ಕಟುವಾಗಿ ಟೀಕಿಸಿದರು.

ಮೋದಿ ಸರಕಾರದಿಂದ ನಾಗರಿಕ ಹಕ್ಕುಗಳಿಗೆ ಬೆದರಿಕೆಯಿರಬಹುದೆಂಬ ಆತಂಕ ವ್ಯಕ್ತಪಡಿಸಿದ ಅವರು‘‘ಇನ್ನೊಂದು ಕೆಲವು ವರ್ಷಗಳಲ್ಲಿ ಸರಕಾರವುನಾಗರಿಕ ಹಕ್ಕುಗಳ ಹಾಗೂ ಆರ್‌ಟಿಐ ಕಾಯಿದೆಗಳನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸುವ ಸಾಧ್ಯತೆಯಿದೆ,’’ಎಂದು ಹೇಳಿದರು. ಸಮುದಾಯಗಳನ್ನು ಧ್ರುವೀಕರಿಸಿಯೇ ಭವಿಷ್ಯದಲ್ಲಿ ಚುನಾವಣೆ ಎದುರಿಸುವ ಪ್ರಮೇಯವೂ ಬರಬಹುದೆಂದು ಶೌರಿ ಅಭಿಪ್ರಾಯ ಪಟ್ಟರು.

ಮೋದಿ ಸಚಿವ ಸಂಪುಟದ ಎಷ್ಟು ಮಂದಿ ಸದಸ್ಯರು ಕಳೆದ ಹತ್ತು ವರ್ಷಗಳಲ್ಲಿ ಪುಸ್ತಕವೊಂದನ್ನು ಓದಿದ್ದಾರೆ ಎಂದು ಪ್ರಶ್ನಿಸಿ ಅವರು ಮೋದಿ ಸರಕಾರವನ್ನು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News