ಮಲೇರಿಯಾ ನಿಯಂತ್ರಣ: 7 ಕಟ್ಟಡಗಳಿಗೆ ದಂಡ!

Update: 2016-03-05 11:03 GMT

ಮಂಗಳೂರು, ಮಾ. 5: ಮಹಾನಗರ ಪಾಲಿಕೆಯ ಮಲೇರಿಯಾ ನಿಯಂತ್ರಣ ಘಟಕದ ಸಿಬ್ಬಂದಿಗಳು ನಡೆಸಿದ ಸಮೀಕ್ಷೆಯ ಆಧಾರದಲ್ಲಿ ನಗರದ ಏಳು ಕಟ್ಟಡಗಳಿಗೆ ದಂಡ ವಿಧಿಸಲು ಕ್ರಮ ವಹಿಸಲಾಗಿದೆ ಎಂದು ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮನಪಾದ ಮಲೇರಿಯಾ ನಿಯಂತ್ರಣ ಘಟಕದ 57ಸಿಬ್ಬಂದಿಗಳು ಕಳೆದ ಫೆಬ್ರವರಿ 5ರಿಂದ 10 ದಿನಗಳ ಅವಧಿಯಲ್ಲಿ ಮನಪಾ ವ್ಯಾಪ್ತಿಯ ಎಲ್ಲಾ 256 ಬಹುಮಹಡಿ ಕಟ್ಟಡಗಳು ಹಾಗೂ ಆಯ್ದ 145 ವೈಯಕ್ತಿಕ ವಾಸ್ತವ್ಯ ಕಟ್ಟಡಗಳ ಸಮೀಕ್ಷೆ ನಡೆಸಿದ ಆಧಾರದಲ್ಲಿ ಮಲೇರಿಯಾ ಉತ್ಪತ್ತಿಗೆ ಕಾರಣವಾಗುವ, ಯಾವುದೇ ಕ್ರಮ ಕೈಗೊಳ್ಳದ ಏಳು ಕಟ್ಟಡಗಳ ಮೇಲೆ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ಅವರುಹೇಳಿದರು.

ಮಲೇರಿಯಾ ನಿಯಂತ್ರಕ್ಕೆ ಸಂಬಂಧಿಸಿ ಮನಪಾದ ಮಲೇರಿಯಾ ನಿಯಂತ್ರಣ ಕ್ರಿಯಾ ಸಮಿತಿ ಸಭೆ ಇತ್ತೀಚೆಗೆ ನಡೆದಿದ್ದು, ಸಭೆಯಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮುಂದಿನ ನಾಲ್ಕು ಅವಧಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ.

ಮಲೇರಿಯಾ ನಿಯಂತ್ರಣಕ್ಕೆ ಮಳೆಗಾಲದಲ್ಲಿ ಎಂಟು ಅಂಶಗಳಕಾರ್ಯಕ್ರಮ ಕುರಿತು ಚರ್ಚಿಸಿ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಚಿತ ಮಲೇರಿಯಾ ರೋಗ ಪತ್ತೆ ಮತ್ತು ಚಿಕಿತ್ಸಾ ಕೇಂದ್ರಗಳನ್ನು ಹೆಚ್ಚಿಸುವುದು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಕ್ರಮ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತೆರೆಯಲಾಗಿರುವ ಆರೋಗ್ಯ ಕೇಂದ್ರಗಳನ್ನು ಮಲೇರಿಯಾ ನಿಯಂತ್ರಣ ಘಟಕದೊಂದಿಗೆ ಸಂಯೋಜಿಸುವುದು, ಮಾಹಿತಿ- ಶಿಕ್ಷಣ ಮತ್ತು ಸಂವಾಹ ಕಾರ್ಯಕ್ರಮ, ಬಾವಿಗಳ ಸಮೀಕ್ಷೆ ಮತ್ತು ಗಪ್ಪಿ ಮೀನು ಬಿಡುವ ಕಾರ್ಯಕ್ರಮ, ಮೆಡಿಕಲ್ ಕಾಲೇಜುಗಳ ಸಮುದಾಯ ಔಷಧ ವಿಭಾಗಗಳ ಸಹಯೋಗ, ಸಮನ್ವಯ- ಪ್ರಗತಿ ಪರೀಲನಾ ಸಭೆಗಳು, ಉತ್ತಮ ಕಾರ್ಯನಿರ್ವಹಣೆ ಗುರುತಿಸುವುದು ಮತ್ತು ಪ್ರೋತ್ಸಾಹಿಸುವ ಎಂಟು ಅಂಶಗಳ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿದೆ ಎಂದು ಅವರು ಹೇಳಿದರು.

ಕಾನೂನು ರೀತಿಯಲ್ಲೇ ಯೋಜನೆಗಳಿಗೆ ಅನುಮೋದನೆ

ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ಕಾನೂನು ರೀತಿಯಲ್ಲೇ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಕುರಿತು ವಿಪಕ್ಷದ ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾದುದು ಎಂದು ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಅಗತ್ಯ ಯೋಜನೆಗಳಿಗೆ ಪೂರ್ವಭಾವಿ ಮಂಜೂರಾತಿ ನೀಡುವುದು ಮೇಯರ್ ವಿಶೇಷ ಅಧಿಕಾರ. ಇದು ಬಿಜೆಪಿ ಆಡಳಿತದಲ್ಲೂ ಇದಕ್ಕಿಂತಲೂ ಅಧಿಕ ವೌಲ್ಯದ ಕಾಮಗಾರಿಗಳಿಗೆ ಅನುಮೋದನೆ ನೀಡುವ ಕಾರ್ಯ ನಡೆದಿದೆ ಎಂದು ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ಮೇಯರ್ ಹೇಳಿಕೆಯನ್ನು ಸಮರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News