ಕಿನ್ನಿಗೋಳಿ: ಮಾರ್ಚ್ 6 ರಂದು ' ತೆಲಿಕೆ ನಲಿಕೆದ ಉಚ್ಚಯ ಮಿತ್ರೋತ್ಸವ ' ಕಾರ್ಯಕ್ರಮ
ಕಿನ್ನಿಗೋಳಿ, ಮಾ.5: ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಹಾಗೂ ಶ್ರೀ ವಿನಾಯಕ ಮಿತ್ರ ಮಂಡಳಿಯ ಆಶ್ರಯದಲ್ಲಿ ತೆಲಿಕೆ ನಲಿಕೆದ ಉಚ್ಚಯ ಮಿತ್ರೋತ್ಸವ 2016 ಮಾರ್ಚ್ 6 ರಂದು ಭಾನುವಾರ ಕೆಮ್ರಾಲ್ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಗೌರವ ಸಲಹೆಗಾರ ಪರಮಾನಂದ ಸಾಲ್ಯಾನ್ ಶುಕ್ರವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪರಿಸರದ ಸಂಘ ಸಂಸ್ಥೆಗಳ ಜೊತೆಗೂಡಿ ತುಳುನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆ.ಕೆ.ಪೇಜಾವರ ಗ್ರಾಮೀಣ ಕ್ರೀಡೆಗಳು, ದಯನಂದ್ ಕತ್ತಲಸಾರ್ ದೈವರಾಧನೆ ಮತ್ತು ತುಳುನಾಡಿನ ಸಂಸ್ಕೃತಿ, ಹಾಗೂ ಡಾ. ವೈ.ಎನ್.ಶೆಟ್ಟಿ ತುಳುವರ ಬದುಕಿನ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭ ಗ್ರಾಮೀಣ ಆಟಗಳು ಸ್ಪರ್ಧಾರೂಪ ಮನೆರಜನೆ ರೂಪದಲ್ಲಿ ನಡೆಯಲಿದೆ. ಅಲ್ಲದೆ ಗ್ರಾಮೀಣ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ನಡೆಯುವುದು. ಈ ಕಾರ್ಯಕ್ರಮದಲ್ಲಿ ದಾನಿಗಳಿಂದ ಹಾಗೂ ಅಭಿಮಾನಿಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಆರ್ಥಿಕವಾಗಿ ದುರ್ಬಲರಾದ 5 ಕುಟುಂಬಗಳ ಸೂರು ಹಾಗೂ ಮೂಲಭೂತಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಅಲ್ಲದೆ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಅವರನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘದಗೌರವ ಸಲಹೆಗಾರ ಜಯಾನಂದ ಸುವರ್ಣ, ಯುಗಪುರುಷದ ಭುವನಾಭಿರಾಮ ಉಡುಪ, ಸಂಘದ ಅಧ್ಯಕ್ಷ ಶೇಖರ್ ತೋಕೂರು, ಕಾರ್ಯದರ್ಶಿ ರಾಜೇಶ್ ದಾಸ್ ಉಪಸ್ಥಿತರಿದ್ದರು.