ಕಟೀಲು : ಉಚಿತ ಸಾಮೂಹಿಕ ವಿವಾಹ
Update: 2016-03-05 17:10 IST
ಕಟೀಲು, ಮಾ.5: ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಎಪ್ರಿಲ್ 27 ರಂದು ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ನಡೆಯಲಿದೆ. ಮದುಮಗನಿಗೆ ಧೋತಿ, ಶಾಲು ಹಾಗೂ ಮಧುಮಗಳಿಗೆ ಸೀರೆ, ರವಕೆ ಕಣ, ಕರಿಮಣಮತ್ತು ಚಿನ್ನದ ತಾಳಿ ನೀಡಲಾಗುವುದು ಎಂದು ದಿ . ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀನಾರಾಯಣ ಆಸ್ರಣ್ಣ ತಿಳಿಸಿದ್ದಾರೆ. ವಧು ವರರ ವಿವರ ಹಾಗೂ ದಾಖಲೆಗಳನ್ನು ನೋಟರಿ ಮೂಲಕ ದೃಡೀಕರಿಸಿ ಎಪ್ರಿಲ್ 15 ರೊಳಗೆ ತಲುಪಿಸಬೇಕು. ಆಸಕ್ತರು ಲಕ್ಷ್ಮೀನಾರಾಯಣ ಆಸ್ರಣ್ಣ (ಶ್ರೀ ಕ್ಷೇತ್ರ ಕಟೀಲು), ಹರಿಕೃಷ್ಣ ಪುನರೂರು, ಕೊಡೆತ್ತೂರು ಭುವನಾಭಿರಾಮ ಉಡುಪ ಯುಗಪುರುಷ ಕಿನ್ನಿಗೋಳಿ, ಪಿ.ಸತೀಶ್ ರಾವ್ ಸ್ವಾತಿ ಸ್ವೀಟ್ಸ್ ಕಿನ್ನಿಗೋಳಿ, ಪ್ರದೀಪ್‌ಕುಮಾರ್ ಕಲ್ಕೂರ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.