ಭಟ್ಕಳ ಬಂದ್ ಯಶಸ್ವಿಗೆ ಸಹಕರಿಸಿದ ಹಿಂದೂ-ಮುಸ್ಲಿಮರಿಗೆ ತಂಝೀಮ್‌ನಿಂದ ಕೃತಜ್ಞತೆ
ಭಟ್ಕಳ: ಧರ್ಮದ ಕೇವಲವಾಗಿ ಮಾತನಾಡಿದ ಸಂವಿಧಾನ ವಿರೋಧಿ ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತ್‌ಕುಮಾರ್ ಹೆಗಡೆ ಬಂಧನಕ್ಕೆ ಆಗ್ರಹಿಸಿ ಶನಿವಾರ ಉತ್ತರಕನ್ನಡ ಹಾಗೂ ರಾಜ್ಯದ ಹಲವು ಕಡೆ ಸ್ವಯಂ ಪ್ರೇರಿತ ಬಂದ್ ಮಾಡುವುದರ ಮೂಲಕ ರಾಜ್ಯದ ಜನತೆ ತಮ್ಮ ಐಕ್ಯತೆಯನ್ನು ಪ್ರದರ್ಶಿಸಿದ್ದು ಇದಕ್ಕೆ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ ಕೃತಜ್ಞತೆ ಸಲ್ಲಿಸಿದ್ದಾರೆ.
ಶನಿವಾರ ತಂಝೀಮ್ ಕಾರ್ಯಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಸ್ಲಿಮ್ ಹಾಗೂ ಇಸ್ಲಾಂ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದರ ವಿರುದ್ಧ ಇಡೀ ಜಗತ್ತಿನ ಮುಸ್ಲಿಮರು ಒಟ್ಟಾಗಿದ್ದಾರೆ. ಹಲವಾರು ಕಡೆಗಳಲ್ಲಿ ಧರ್ಮನಿಂದಕನ ವಿರುದ್ಧ ಪ್ರತಿಭಟನೆ ವ್ಯಕ್ತವಾಗತೊಡಗಿದೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆದರೆ ಇದುವರೆಗೆ ಯಾವುದೇ ಕ್ರಮ ಜರಗಿಸಿಲ್ಲ. ನಾವು ಉತ್ತರಕನ್ನಡ ಜಿಲ್ಲೆಯ ಸರ್ವ ಮುಸ್ಲಿಮ ಜಮಾಅತ್ ನವರು ಅನಂತ್‌ಕುಮಾರರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸುತ್ತೇವೆ. ಜಿಲ್ಲೆಯ ಜನರು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್ ಗೆ ಸಾತ್ ನೀಡಿದ್ದಾರೆ.ಬಹಳಷ್ಟು ಹಿಂದೂ ಬಾಂಧವರು ಬಂದ್ ನಲ್ಲಿ ನಮ್ಮೊಂದಿಗೆ ಸಹಕರಿಸಿದ್ದಾರೆ.ಅದಕ್ಕಾಗಿ ತಂಝೀಮ್ ಪರವಾಗಿ ಅವರನ್ನುಅಭಿನಂದಿಸುವುದಾಗಿ ಅವರು ತಿಳಿಸಿದರು.ಜಿಲ್ಲೆಯ ಮುಸ್ಲಿಮರು ಅನಂತ್‌ಕುಮಾರರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಸ್ಲಿಮರಿಗೆ ನ್ಯಾಯಾ ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಬಂದ್ ವೇಳೆ ಭಟ್ಕಳದ ಯುವಕರು ಇಲ್ಲಿ ಶಾಂತಿ ಹಾಗೂ ಕಾನೂನು ಸುವೆವಸ್ಥೆಯನ್ನು ಕಾಪಾಡಿಕೊಂಡು ಹೋಗುವಲ್ಲಿ ಸಕ್ರಿಯರಾಗಿದ್ದಾರೆ. ಎಲ್ಲಕಡೆಯೂ ಶಾಂತಿ ಇದೆ.ಯಾವುದೇ ರೀತಿಯ ಘೋಷಣೆಗಳಾಗಲಿ, ಒತ್ತಾಯವಾಗಲಿ ಇಲ್ಲ, ಕಾನೂನಿ ಚೌಕಟ್ಟಿನೊಳಗೆ ಎಲ್ಲವೂ ಶಾಂತಿಯುತವಾಗಿ ನಡೆದಿದೆ. ಈ ನಿಟ್ಟಿನಲ್ಲಿ ಬಂದ್ ನಲ್ಲಿ ಪಾಲ್ಗೊಂಡಎಲ್ಲ ಮುಸ್ಲಿಮರಿಗೂ ಹಾಗೂ ಬಂದ್ ಸಮರ್ಥಿಸಿ ನಮ್ಮೊಂದಿಗೆ ಸಹಕರಿಸಿದ ಎಲ್ಲ ಹಿಂದು, ಕೈಸ್ತ ಮತ್ತಿತರರ ಸಮುದಾಯದ ಬಾಂಧವರಿಗೂ ಹಾಗೂ ಕಾನೂನು ಸುವೆವಸ್ಥೆಯನ್ನು ಕಾಪಾಡಿಕೊಂಡು ಬಂದ ಆರಕ್ಷಕ ಇಲಾಖೆಗೂ ತಂಝೀಮ್ ಸಂಸ್ಥೆಯ ಮೂಲಕ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದರು.