ಮೂಡುಬಿದಿರೆ : ವಲಯ ಅರಣ್ಯಾಧಿಕಾರಿಗಳ ಕಛೇರಿ ವತಿಯಿಂದ " ಚಿಣ್ಣರ ವನ್ಯ ದರ್ಶನ "
Update: 2016-03-05 20:07 IST
ಮೂಡುಬಿದಿರೆ : ಇಲ್ಲಿಂದಲೇ ವಲಯ ಅರಣ್ಯಾಧಿಕಾರಿಗಳ ಕಛೇರಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಚಿಣ್ಣರ ವನ್ಯ ದರ್ಶನದ ಅಂಗವಾಗಿ ಕಲ್ಲಬೆಟ್ಟು ಎಕ್ಸಲೆಂಟ್ ಶಾಲೆಯ 39 ವಿದ್ಯಾರ್ಥಿಗಳಿಗೆ ಕುತ್ಲೂರು ನರ್ಸರಿ, ಹೊಸ್ಮಾರು ಡಿಪ್ಪೋ, ಹನುಮಾನ್ ಗುಂಡಿ ಹಾಗೂ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ್ನು ಶನಿವಾರ ದರ್ಶನವನ್ನು ಮಾಡಿಸಲಾಯಿತು. ಮೂಡುಬಿದಿರೆ ವಲಯಾರಣ್ಯಾಧಿಕಾರಿ ಜಿ.ಡಿ.ದಿನೇಶ್, ಉಪವಲಯಾರಣ್ಯಾಧಿಕಾರಿಗಳಾದ ಪ್ರಕಾಶ್ ಶೆಟ್ಟಿ, ಅನಿಲ್, ಹೊಸ್ಮರ್ ಡಿಪ್ಪೊದ ಮಂಜುನಾಥ್ ಗಾಣಿಗ, ಬಜಗೋಳಿಯ ಉಪವಲಯಾರಣ್ಯಾಧಿಕಾರಿ ಪ್ರಮೋದ್, ಬೆಳುವಾಯಿಯ ಗಾರ್ಡ್ ಬಸಪ್ಪ, ವಾಚರ್ ನಾರಾಯಣ ಈ ಸಂದರ್ಭದಲ್ಲಿದ್ದರು.
ಅಲಂಗಾರು ಅಬ್ಬಾಸ್ ಸಾಮಿಲ್ಲ್ ನ ಮಹಮ್ಮದಾಲಿ ಅಬ್ಬಾಸ್ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದರು. ಮೂಡುಬಿದಿರೆ ತ್ರಿಭುವನ್ ಜೇಸಿಐ ನ ಅಧ್ಯಕ್ಷೆ ರಶ್ಮಿತಾ ಯುವರಾಜ್ ಜೈನ್ ಈ ಸಂದರ್ಭದಲ್ಲಿದ್ದರು.