ಮಂಗಳೂರು : 8ರಂದು ತುಳು ಭವನದಲ್ಲಿ ಗಿರಿಜನ ಉತ್ಸವ
Update: 2016-03-05 21:37 IST
ಮಂಗಳೂರು ಮಾ.5: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಮಾ. 8ರಂದು, ಗಿರಿಜನ ಉತ್ಸವ ಕಾರ್ಯಕ್ರಮವು ಉರ್ವಸ್ಟೋರ್‌ನ ತುಳು ಭವನದಲ್ಲಿ ನಡೆಯಲಿದೆ. ಅರಣ್ಯ ಮತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಂದು ಪೂರ್ವಾಹ್ನ 11.30ಕ್ಕೆ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಶಾಸಕ ಜೆ.ಆರ್ ಲೋಬೋ ಅಧ್ಯಕ್ಷತೆ ವಸಲಿರುವರು. ಪೂರ್ವಾಹ್ನ 10.30 ರಿಂದ ದಿನವಿಡಿ ನಡೆಯುವ ಸಾಂಸ್ಕೃತ್ರಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಕಲಾವಿದರಿಂದ ಬುಡಕಟ್ಟು ಕಲಾಪ್ರದರ್ಶನ, ಜನಪದ ಹಾಡುಗಳು, ಕಂಗೀಲು, ಕೊರಗರ ಡೋಲು ಕುಣಿತ, ಕೊರಗರ ಗಜ ಮೇಳ, ಸುಗಮ ಸಂಗೀತ, ಗುಮಟೆ ನೃತ್ಯ, ಕೋಲಾಟ, ಶಾಸ್ತ್ರೀಯ ನೃತ್ಯ, ದಾಸರ ಪದಗಳು, ಯಕ್ಷಗಾನ ಮೊದಲಾದ ಕಲಾಪ್ರಕಾರಗಳು ಪ್ರದರ್ಶನಗೊಳ್ಳಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.