ಲಾರಿ ಢಿಕ್ಕಿ: ವ್ಯಕ್ತಿ ಮೃತ್ಯು
Update: 2016-03-05 22:47 IST
ಮಂಗಳೂರು, ಮಾ. 5: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವನಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೃತರನ್ನು ಮುಲ್ಕಿ ಸಮೀಪದ ಕೊಳಚಿಕಂಬಳದ ನಿವಾಸಿ ಗಣೇಶ್ ಪೂಜಾರಿ (56) ಎಂದು ಗುರುತಿಸಲಾಗಿದೆ.ಬಪ್ಪನಾಡು ದೇವಸ್ಥಾನದ ಬಳಿ ನಿಂತಿದ್ದ ಗಣೇಶ್ ಪೂಜಾರಿಗೆ ಮಂಗಳೂರಿನಿಂದ ಉಡುಪಿಯ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಲಾರಿ ಚಾಲಕ ದತ್ತಾತ್ರೆಯ ತುಕರಾಂ ಎಂಬವರ ನಿರ್ಲಕ್ಷ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನಋನಲಾಗಿದೆ. ಕೃಷ್ಣ ಆರ್.ಕೋಟ್ಯಾನ್ ಎಂಬವರು ನೀಡಿದ ದೂರಿನ ಮೇರೆಗೆ ಸುರತ್ಕಲ್ ಸಂಚಾರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.