10ರಂದು ಅಂಗಾಂಗ ದಾನಿಗಳು ಮತ್ತು ದೇಹ ದಾನಿಗಳಿಗೆ ಗೌರವಾರ್ಪಣೆ
Update: 2016-03-05 22:49 IST
ಮಂಗಳೂರು, ಮಾ. 5: ಸಮಾಜದಲ್ಲಿ ಅಂಗಾಂಗ ದಾನದ ಅರಿವು ಹಾಗೂ ದಾನಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಜನಜಾಗೃತಿ ಆಂದೋಲನದ ಭಾಗವಾಗಿ, ಕಿಡ್ನಿ ಒಳಗೊಂಡಂತೆ ದೇಹದ ಇತರ ಅಂಗಾಂಗಗಳನ್ನು ಈಗಾಗಲೇ ದಾನ ಮಾಡಿರುವ ಹಾಗೂ ಮರಣಾ ನಂತರ ದೇಹ ದಾನ ಮಾಡುವ ಉಯಿಲು ಬರೆದಿರುವವರಿಗೆ ಗೌರವಾರ್ಪಣೆ ಮಾಡುವ ವಿಶೇಷ ಕಾರ್ಯಕ್ರಮವನ್ನು ಕಿಡ್ನಿ ರೋಗಿಗಳ ಸಂಘವು ಹಮ್ಮಿಕೊಂಡಿದೆ. ನಗರದ ಪುರಭವನದಲ್ಲಿ ಮಾರ್ಚ್ 10ರಂದು ನಡೆಯಲಿರುವ ‘ವಿಶ್ವ ಕಿಡ್ನಿ ದಿನಾಚರಣೆ ಮತ್ತು ಕಿಡ್ನಿ ರೋಗಿಗಳ ಸಮಾವೇಶ’ದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಮಾರ್ಚ್ 8ರ ಒಳಗಾಗಿ ಕಿಡ್ನಿ ರೋಗಿಗಳ ಸಂಘ, ಸಿ-24, 2ನೆ ಮಹಡಿ, ಅಲ್ ರಹಬಾ ಪ್ಲಾಝಾ ಕಟ್ಟಡ, ನೆಲ್ಲಿಕಾಯಿ ರಸ್ತೆ, ಮಂಗಳೂರು - 575001 ಅಥವಾ ದೂ. 0824-4261320 ಮೊಬೈಲ್ ಸಂಖ್ಯೆ. 9845054191 ಇಮೈಲ್:kpamng@gmail.com ಸಂಪರ್ಕಿಸುವಂತೆ ವಿಶ್ವ ಕಿಡ್ನಿ ದಿನಾಚರಣೆ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾ