×
Ad

ಕಾರ್ಕಳ ಪುರಸಭೆಯಿಂದ ಸಾಲಮನ್ನಾ ತಿಳುವಳಿಕೆ ಪತ್ರ ವಿತರಣೆ

Update: 2016-03-05 23:20 IST


ಕಾರ್ಕಳ, ಮಾ.5: ಕಾರ್ಕಳ ಪುರಸಭೆ ಯಿಂದ ಸಾಲಮನ್ನಾ ತಿಳುವಳಿಕೆ ಪ್ರಮಾಣ ಪತ್ರವನ್ನು ಶನಿವಾರ ವಿತರಿಸಲಾಯಿತು. ಪುರಸಭೆ ವ್ಯಾಪ್ತಿಯ ಒಟ್ಟು 186 ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅಧ್ಯಕ್ಷೆ ರಹ್ಮತ್ ಎನ್. ಶೇಖ್, 1993-94ರಿಂದ 2003ರವರೆಗೆ ಫಲಾನುಭವಿಗಳು ಪಡೆದ ಆಶ್ರಯ ಸಾಲವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮನ್ನಾ ಮಾಡಿದೆ. ಸರಕಾರವನ್ನು ನಾನು ಅಭಿನಂದಿಸುತ್ತೇನೆ. ಫಲಾನುಭವಿಗಳು ಸರಕಾರಕ್ಕೆ ಅಡಮಾನ ಹಾಕಿದ ಹಕ್ಕುಪತ್ರಗಳನ್ನು ಇದೀಗ ವಾಪಸ್ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು. ಪುರಸಭೆ ಉಪಾಧ್ಯಕ್ಷೆ ಶಶಿಕಲಾ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಪುರಸಭೆಯ ಸದಸ್ಯರಾದ ಸುಭಿತ್.ಎನ್.ಆರ್, ನಳಿನಿ ಆಚಾರ್ಯ, ಅಶ್ಫಕ್ ಅಹ್ಮದ್, ಮುಹಮ್ಮದ್ ಶರೀಫ್, ಮುಖ್ಯಾಧಿಕಾರಿ ರಾಯಪ್ಪಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಈಶ್ವರ ನಾಯ್ಕಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News