ಮಂಗಳೂರು ವಿವಿ ಪದವಿ ಫಲಿತಾಂಶ: ಗೊಂದಲ ಪರಿಹಾರಕ್ಕೆ ಸಹಾಯವಾಣಿ
ಮಂಗಳೂರು, ಮಾ.5: ಮಂಗಳೂರು ವಿಶ್ವ ವಿದ್ಯಾ ನಿಲಯದ ಪದವಿ ಪರೀಕ್ಷೆ ಫಲಿತಾಂಶದಲ್ಲಿ ಉಂಟಾ ಗಿರುವ ಗೊಂದಲವನ್ನು ಒಂದು ವಾರದೊಳಗೆ ಸರಿಪಡಿಸಲು ವಿಶೇಷ ತಂಡ ರಚಿಸಲಾಗಿದೆ. ಈ ಪ್ರಯುಕ್ತ ಸಹಾಯವಾಣಿಯನ್ನೂ ಆರಂಭಿ ಸಲಾಗಿದೆ ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಎ.ಎಂ.ಖಾನ್ ಇಂದು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಪದವಿ ಫಲಿತಾಂಶ ಪ್ರಕಟಿಸುವ ವೇಳೆ ಸ್ವಲ್ಪ ವಿಳಂಬವಾಗಿದೆ. ಕೆಲವು ಕಾಲೇಜುಗಳು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸುವ ಸಂದರ್ಭ ವಿವಿಯ ಅನುಮತಿ ಪಡೆಯದೆ ಇರು ವುದು, ಆಂತರಿಕ ವೌಲ್ಯಮಾಪನದ ಅಂಕ ಗಳನ್ನು ಕಳುಹಿಸದೆ ಇರುವುದು, ಕೆಲ ವಿದ್ಯಾರ್ಥಿ ಗಳು ಪರೀಕ್ಷೆ ಬರೆಯುವ ಸಂದರ್ಭ ಉತ್ತರ ಪತ್ರಿಕೆಯಲ್ಲಿ ತಮ್ಮ ಕೋಡ್ ನಂಬ್ರಗಳನ್ನು ತಪ್ಪಾಗಿ ಉಲ್ಲೇಖಿಸಿರುವುದು ಮೊದಲಾದ ತಪ್ಪುಗಳು ಫಲಿತಾಂಶದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಸಂಬಂಧ ಇದುವರೆಗೆ ವಿದ್ಯಾರ್ಥಿಗಳಿಂದ 340 ದೂರುಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ 202 ದೂರುಗಳಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡಿ ಪರಿಹರಿಸಲಾಗಿದೆ. ಇನ್ನುಳಿದಂತೆ ಈ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ವಿಶೇಷ ತಂಡ ರಚಿಸಲಾಗಿದೆ ಎಂದರು.
ಇದಲ್ಲದೆ, ಇಂದಿನಿಂದ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿವಿಯಲ್ಲಿ ವಿಶೇಷ ಹೆಲ್ಪ್‌ಡೆಸ್ಕ್ ವಿಭಾಗವನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು 0824-2287277 ಅಥವಾ 0824-2287327 ದೂ. ಸಂಖ್ಯೆಗಳಿಗೆ ಕರೆ ಮಾಡಿ ದೂರು ದಾಖಲಿ ಸಬಹುದು. ಸಮಸ್ಯೆ ಪರಿಹರಿಸಿ ಶೀಘ್ರದಲ್ಲಿ ಪರಿಷ್ಕೃತ ಫಲಿತಾಂಶ ಹಾಗೂ ಅಂಕಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪರೀಕ್ಷಾಂಗ ವಿಭಾಗದ ಸಹಾಯಕರಾದ ಮನೋಹರ ಎಂ.ಜಿ., ಪ್ರಶಾಂತ್ ಹಾಗೂ ಪ್ರೊ.ಜಿ.ಪಿ.ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.