ಮೊರಾರ್ಜಿ ವಸತಿ ಶಾಲೆ: ಇಂದು ಪ್ರವೇಶ ಪರೀಕ್ಷೆ
Update: 2016-03-05 23:32 IST
ಮಂಗಳೂರು ಮಾ.5: ದ.ಕ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರಿನ ಕಮ್ಮಾಜೆ, ಕಲ್ಲಬೆಟ್ಟು, ನೀರುಮಾರ್ಗ, ಬಂಟ್ವಾಳದ ವಗ್ಗ, ಬೆಳ್ತಂಗಡಿಯ ಮುಂಡಾಜೆ, ಮಚ್ಚಿನ ಪುತ್ತೂರಿನ ಬಲ್ನಾಡು ಹಾಗೂ ಸುಳ್ಯದ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 6ನೆ ತರಗತಿ ಪ್ರವೇಶಕ್ಕಾಗಿ ಮಾ.6ರಂದು ಪೂರ್ವಾಹ್ನ 11ರಿಂದ 1 ಗಂಟೆ ಯವರೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.
ಮಂಗಳೂರಿನ ಮಿಲಾಗ್ರಿಸ್ ಪದವಿಪೂರ್ವ ಕಾಲೇಜು, ಹಂಪನಕಟ್ಟೆ, ಬಂಟ್ವಾಳದ ಸರಕಾರಿ ಪ್ರೌಢಶಾಲೆ, ಕೊಡಂಗೆ, ಬಿ.ಸಿ.ರೋಡ್, ಬೆಳ್ತಂಗಡಿಯ ಸಂತ ತರೇಸಾ ಪ್ರೌಢಶಾಲೆ, ಪುತ್ತೂರಿನ ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಹಾಗೂ ಸುಳ್ಯದ ಸರಕಾರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿವೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824- 2451237 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.