×
Ad

ಸಾಹಿತ್ಯಕ್ಕೆ ಧರ್ಮದ ಚೌಕಟ್ಟನ್ನು ವಿರೋಧಿಸಿದ್ದ ಬಾಳಿಲ: ಡಾ.ತಾಳ್ತಜೆ

Update: 2016-03-05 23:34 IST

ವುಂಗಳೂರು, ಮಾ.5: ಸಾಹಿತ್ಯಕ್ಕೆ ಧರ್ಮದ ಚೌಕಟ್ಟನ್ನು ನಿರ್ಮಿಸುವುದನ್ನು ದಿಟ್ಟವಾಗಿ ವಿರೋಧಿಸಿದ ನೇರ ನಡೆನುಡಿಯ ವ್ಯಕ್ತಿತ್ವವನ್ನು ಬಾಳಿಲ ಕೃಷ್ಣಶಾಸ್ತ್ರಿ ಹೊಂದಿ ದ್ದರು ಎಂದು ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ತಿಳಿಸಿದರು.

ಕರ್ನಾಟಕ ಕೋಮು ಸೌರ್ಹಾದ ವೇದಿಕೆಯ ದ.ಕ. ಜಿಲ್ಲಾ ಘಟಕದ ವತಿಯಿಂದ ಅಗಲಿದ ಹಿರಿಯ ಸಾಹಿತಿ ಬಾಳಿಲ ಕೃಷ್ಣಶಾಸ್ತ್ರಿಯವರಿಗೆ ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾನಿಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.

ಸಾಹಿತ್ಯ ಸಮ್ಮೇಳನಗಳನ್ನು ಧಾರ್ಮಿಕ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳುವುದನ್ನು ನೇರವಾಗಿ ವಿರೋಧಿಸಿದ ಬಾಳಿಲ ಕೃಷ್ಣಶಾಸ್ತ್ರಿ, ಮಾನವೀಯ ವೌಲ್ಯಗಳನ್ನು ಹೊಂದಿದ್ದ ಉತ್ತಮ ಶಿಕ್ಷಕರಾಗಿದ್ದರು. ಜೊತೆಗೆ ಸಾಹಿತ್ಯ ಪರಿಚಾರಿಕೆಯ ಕೆಲಸವನ್ನು ಬದ್ಧತೆಯೊಂದಿಗೆ ನಿರ್ವಹಿಸಿದವರು.ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ, ಶಿಕ್ಷೆ ನೀಡದೆ ಶಿಕ್ಷಣ ನೀಡುವುದು, ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಪರಿಗಣಿಸಬೇಕು ಎನ್ನುವುದನ್ನು ಗಟ್ಟಿಯಾಗಿ ಪ್ರತಿಪಾದಿಸಿದವರು.

ಗ್ರಾಮೀಣ ಪ್ರದೇಶದಲ್ಲಿ ಆಂಗ್ಲಭಾಷೆಯನ್ನು ಅತ್ಯಂತ ಸರಳ ಹಾಗೂ ಪರಿಣಾಮಕಾರಿ ವಿಧಾ ನದ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡು ತ್ತಿದ್ದವರಲ್ಲಿ ಬಾಳಿಲ ಕೃಷ್ಣಶಾಸ್ತ್ರಿಗಳು ಒಬ್ಬರಾಗಿದ್ದರು. ಶಾಸ್ತ್ರಿಗಳು ಒಬ್ಬ ಉತ್ತಮ ಕಾರ್ಯಕ್ರಮ ನಿರೂಪಕರಾಗಿದ್ದರು. ಅವರು ನಿರೂಪಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಲವಲವಿಕೆ ಇರುತ್ತಿತ್ತು ಎಂದು ತಾಳ್ತಜೆ ವಸಂತ ಕುಮಾರ್ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ವಹಿಸಿದ್ದರು.
 ಕರ್ನಾಟಕ ಕೋಮು ಸೌರ್ಹಾದ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು. ‘ಪಡಿ’ ಸಂಘಟನೆಯ ನಿರ್ದೇಶಕ ರೆನ್ನಿ ಡಿಸೋಜ ಹಾಗೂ ಬಾಳಿಲ ಕೃಷ್ಣಶಾಸ್ತ್ರಿಯವರ ಪತ್ನಿ ಸರಸ್ವತಿ ಈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಾಳಿಲ ಕೃಷ್ಣ ಶಾಸ್ತ್ರಿಗಳು ಶಿಕ್ಷಣದ ಖಾಸಗೀಕರಣವನ್ನು ಬಲವಾಗಿ ವಿರೋಧಿಸಿದವರು. ಶಿಕ್ಷಣ ಕ್ಷೇತ್ರದಲ್ಲಿ ಪಠ್ಯಕ್ರಮ ಹಾಗೂ ಶಿಕ್ಷಣದಲ್ಲಿ ಬೋಧನಾ ಕ್ರಮದ ಬಗ್ಗೆ ವಿರೋಧ ಹೊಂದಿದ್ದ ಬಾಳಿಲ ಕೃಷ್ಣ ಶಾಸ್ತ್ರಿ ಸಮಾಜದ ಸಮಕಾಲೀನ ಸಮಸ್ಯೆಗಳಾದ ಕೋಮುವಾದ, ವೈಜ್ಞಾನಿಕ ಮನೋಭಾವದ ಕೊರತೆ ಸೇರಿದಂತೆ ಹಲವಾರು ಪ್ರಗತಿಪರ ವಿಚಾರ ಧಾರೆಗಳನ್ನು ಮೈಗೂಡಿಸಿಕೊಂಡಿದ್ದರು.
           -ಸುರೇಶ್ ಭಟ್ ಬಾಕ್ರಬೈಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News