×
Ad

ಉಡುಪಿ ನಗರಸಭೆ: ಮಿಗತೆ ಬಜೆಟ್ ಮಂಡನೆ

Update: 2016-03-05 23:37 IST

ಉಡುಪಿ, ಮಾ.5: ಉಡುಪಿ ನಗರಸಭೆ ಅಧ್ಯಕ್ಷ ಪಿ.ಯುವರಾಜ್ ಶನಿವಾರ ನಗರಸಭೆಯ 2016-17ನೆ ಸಾಲಿನ 1,58,96,000 ರೂ. ಮಿಗತೆ ಬಜೆಟ್ ಮಂಡಿಸಿದ್ದಾರೆ. 4453.56 ಲಕ್ಷ ರೂ. ಆರಂಭದ ಶಿಲ್ಕು ಹಾಗೂ 4109.14 ಲಕ್ಷ ರೂ. ಒಟ್ಟು ಸ್ವೀಕೃತಿಗಳು ಸೇರಿ 8562.70ಲಕ್ಷ ರೂ. ಅಂದಾಜು ಒಟ್ಟು ಆದಾಯ ಮತ್ತು 8403.74 ಲಕ್ಷ ರೂ. ಒಟ್ಟು ವೆಚ್ಚಗಳನ್ನು ಅವರು ಬಜೆಟ್‌ನಲ್ಲಿ ತೋರಿಸಿದ್ದಾರೆ. ಈ ಮೂಲಕ ಯುವರಾಜ್ ತಮ್ಮ ಅಧ್ಯಕ್ಷ ಅವಧಿಯ ಮೂರನೆ ಹಾಗೂ ಕೊನೆಯ ಬಜೆಟ್‌ನ್ನು ಮಂಡಿಸಿದರು.
 

ಆದಾಯಗಳ ಅಂದಾಜು:

ಕೇಂದ್ರ ರಾಜ್ಯ ಹಣಕಾಸು ಆಯೋಗಗಳ ಅನು ದಾನ 1352.59 ರೂ., ರಾಜ್ಯ ಹಣಕಾಸು ಆಯೋಗದ ಸಿಬ್ಬಂದಿ ವೇತನ ಅನುದಾನ 3 ಕೋ.ರೂ., ವಿದ್ಯುಚ್ಛಕ್ತಿ ಬಿಲ್ ಅನುದಾನ 3.50 ಕೋ.ರೂ., ಪರ್ಯಾಯೋತ್ಸವದ ವಿಶೇಷ ಅನುದಾನ 5 ಕೋ.ರೂ., ಇತರ ಅನು ದಾನ 1.05 ಕೋ.ರೂ., ಅಮೃತ ಮಹೋತ್ಸವದ ಅನುದಾನ 1.50 ಕೋ.ರೂ., ನಗರಸಭೆ ಆದಾಯಗಳಾದ ಆಸ್ತಿ ತೆರಿಗೆ 8.82 ಕೋ.ರೂ., ವ್ಯಾಪಾರ ಪರವಾನಿಗೆ ಮತ್ತು ಜಾಹೀರಾತು 55 ಲಕ್ಷ ರೂ., ನೀರು ಸರಬರಾಜು ಶುಲ್ಕ 7.25 ಕೋ.ರೂ., ಒಳಚರಂಡಿ ಜೋಡಣೆ 20 ಲಕ್ಷ ರೂ., ವಾಣಿಜ್ಯ ಸಂಕೀರ್ಣ 1.20 ಕೋಟಿ ರೂ.

ವೆಚ್ಚಗಳ ಅಂದಾಜು:
ಆಡಳಿತಾತ್ಮಕ ವೆಚ್ಚ 1,160 ಲಕ್ಷ ರೂ., ಲೋಕೋ ಪಯೋಗಿ ಕಾಮಗಾರಿಗಳು 1,425 ಲಕ್ಷ ರೂ., ದಾರಿದೀಪ ನಿರ್ವಹಣೆ 1 ಕೋಟಿ ರೂ., ನೀರು ಸರಬರಾಜು 317.89 ಲಕ್ಷ ರೂ., ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ 8.81 ಕೋ.ರೂ., ಒಳಚರಂಡಿ ಯೋಜನೆಗಳು 3.15 ಕೋ.ರೂ., ಉದ್ಯಾನವನ ನಿರ್ವಹಣೆ 75 ಲಕ್ಷ ರೂ., ಆರ್ಥಿಕವಾಗಿ ಹಿಂದುಳಿದ ಇತರೆ ಬಡಜನರ ಕಲ್ಯಾಣ ನಿಧಿ 66 ಲಕ್ಷ ರೂ., ವಿಕಲಚೇತನರ ಕಲ್ಯಾಣ ನಿಧಿ 26 ಲಕ್ಷ ರೂ., ನಲ್ಮ್ ಯೋಜನೆ 70 ಲಕ್ಷ ರೂ., ಎಸ್ಸಿ-ಎಸ್ಟಿ ಶ್ರೇಯೋಭಿವೃದ್ಧಿ ನಿಧಿ 192.80 ಲಕ್ಷ ರೂ.
ಅಭಿವೃದ್ಧಿ ಕಾರ್ಯಕ್ರಮಗಳು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಶೌಚಾಲಯ ರಹಿತ ಮನೆಗಳಿಗೆ 20 ಸಾವಿರ ರೂ. ವೆಚ್ಚದಲ್ಲಿ ಶೌಚಾಲಯ ಸಹಿತ ಎಲ್ಲ ಸೌಕರ್ಯ, ಸಮುದಾಯ ಭವನಗಳ ನಿರ್ಮಾಣ, ಮನೆ ನಿರ್ಮಾಣಕ್ಕೆ 70 ಸಾವಿರ ರೂ. ಸಹಾಯಧನ, ಕಲ್ಮಾಡಿ ಸೇತುವೆ ಬಳಿ ಪಾರ್ಕ್ ಅಭಿವೃದ್ಧಿ, ಬೈಲೂರು ಹಾಗೂ ಕಸ್ತೂರ್ಬಾ ನಗರದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ, 55 ಲಕ್ಷ ರೂ. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ 1 ಕೋ.ರೂ. ವೆಚ್ಚದಲ್ಲಿ ಭುಜಂಗ ಪಾರ್ಕ್ ಅಭಿವೃದ್ಧಿ.

ಹೊಸ ರಸ್ತೆ ನಿರ್ಮಾಣಕ್ಕೆ 1169.85 ಲಕ್ಷ ರೂ. ಮೀಸಲು. ನಗರದ ಪ್ರಮುಖ ಸ್ಥಳಗಳಲ್ಲಿ ವೃತ್ತಗಳ ನಿರ್ಮಾಣ, ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಬಳಿ ಸರ್ಕಲ್ ಅಭಿವೃದ್ಧಿ, ಆಸ್ತಿ ತೆರಿಗೆ ಹಾಗೂ ನಗರಸಭೆ ಆಡಳಿತ ಕಚೇರಿಯನ್ನು ‘ಇ’ ಆಡಳಿತವಾಗಿ ಪರಿರ್ವತಿಸಲು ಆಧುನಿಕ ತಂತ್ರಜ್ಞಾನ ಆಳವಡಿಕೆ. ದಾರಿದೀಪದಲ್ಲಿ ಸೋಡಿಯಂ ಲೈಟ್ ಬದಲು ಎಲ್‌ಇಡಿ ದೀಪ ಅಳವಡಿಕೆ ಹಾಗೂ 1 ಕೋ.ರೂ. ವೆಚ್ಚದಲ್ಲಿ ಹೊಸ ದಾರಿದೀಪಗಳ ಅಳವಡಿಕೆ, ಸ್ವಚ್ಛತೆಗೆ 6.20 ಕೋ.ರೂ. ಮೀಸಲು. ಬಯೋ ಶೌಚಾಲಯಗಳ ನಿರ್ಮಾಣ. ಮಲ್ಪೆ -ಪಡುಕೆರೆ ಸೇತುವೆ ಕಾಮಗಾರಿ ಶೀಘ್ರ ಪೂರ್ಣ, ಪೌರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ನಗರಸಭಾ ಸಿಬ್ಬಂದಿಗಾಗಿ ವಸತಿಗೃಹ ನಿರ್ಮಾಣ, ಉಡುಪಿ ಮಲ್ಪೆ ಮಣಿಪಾಲದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣಗಳ ನಿರ್ಮಾಣ.

ಬಜೆಟ್ ಮಂಡನೆಯ ಬಳಿಕ ಅಧ್ಯ ಕ್ಷರು ತನ್ನ ವಿದಾಯ ಭಾಷಣದಲ್ಲಿ ಸಹಕ ರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಬಜೆಟ್ ಕುರಿತು ಪರ-ವಿರೋಧ ಚರ್ಚೆಗಳು ನಡೆದವು. ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಡಿ.ಮಂಜುನಾಥಯ್ಯ ಉಪಸ್ಥಿತರಿದ್ದರು.

ದಿನದ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲು ಕುಡ್ಸೆಂಪ್ 2ನೆ ಹಂತದ ಯೋಜನೆಯಡಿ 35 ಕೋಟಿ ರೂ. ಪ್ರಸ್ತಾಪಕ್ಕೆ ಸರಕಾರ ಅನುಮೋದನೆ ನೀಡಿದೆ. ಮಣಿಪಾಲ, ಸಂತೆಕಟ್ಟೆ ಮತ್ತು ಮಲ್ಪೆ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮೊದಲನೆ ಹಂತದಲ್ಲಿ 50 ಕೋ.ರೂ. ಪ್ರಸ್ತಾಪಕ್ಕೆ ಸರಕಾರದಿಂದ ಅನುಮೋದನೆ ದೊರಕಿದೆ. ಮಣಿಪಾಲ, ಮಿಷನ್ ಕಂಪೌಂಡ್, ಡಯಾನ ಟಾಕೀಸ್, ಬೀಡಿನಗುಡ್ಡೆ, ಸಂತೆಕಟ್ಟೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ 3.50 ಕೋಟಿ ರೂ. ಮೀಸಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News