ಮಾ.8: ಮಹಿಳಾ ಆರೋಗ್ಯ ಜಾಗೃತಿ
ಮಂಗಳೂರು, ಮಾ.5: ನಗರದ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಎ.ಜೆ.ಇನ್‌ಸ್ಟಿಟ್ಯೂಟ್ ಆ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಹಾಗೂ ಲಯನ್ಸ್ ಕ್ಲಬ್ ಕಂಕನಾಡಿ-ಪಡೀಲ್‌ನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮ ಮಾ.8ರಂದು ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದೆ ಎಂದು ಎ.ಜೆ.ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲಿಡ್ವಿನ್ ಡಿಸೋಜಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲಯನ್ಸ್ ಗವರ್ನರ್ ಎಂ.ಕವಿತಾ ಎಸ್.ಶಾಸಿ, ಎ.ಜೆ. ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸಸ್‌ನ ಪ್ರಾಧ್ಯಾಪಕಿ ಡಾ.ಮುಕ್ತಾ ಪೈ, ಲಯನ್ಸ್ ಮುಂದಾಳು ಕೆ.ಸಿ.ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ಕಮಲಾಕ್ಷ ಕೆ.ಶೆಣೈ ಹಾಗೂ ಡಾ. ಕಿರಣ್ ಕುಮಾರ್ ಉಪನ್ಯಾಸ ನೀಡಲಿದ್ದಾರೆ. ಸಂಸ್ಥೆಯ ಉದ್ಯೋಗಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಸೋನಿಯಾ, ಸ್ಮಿತಾ ಶೆಟ್ಟಿ, ದೀಪಾ ಸಿ.ಕೆ.ಉಪನ್ಯಾಸ ನೀಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಶಾ ಶೆಟ್ಟಿ, ಯೋಗೀಶ್ ಹೆಜಮಾಡಿ, ಆಶಾ ಹೆಜಮಾಡಿ, ನಿರ್ಮಲಾ ಉಪಸ್ಥಿತರಿದ್ದರು.