×
Ad

ಉಳ್ಳಾಲ: ವೆಬ್‌ಸೈಟ್ ಅನಾವರಣ

Update: 2016-03-06 00:24 IST

 ಉಳ್ಳಾಲ, ಮಾ.5: ನಾಟೆಕಲ್ ಮಂಗಳ ನಗರದಲ್ಲಿರುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ವೆಬ್‌ಸೈಟ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಂಸ್ಥೆಯ ನಿರ್ದೇಶಕ ಮೊಯ್ದಿನ್ ಕುಂಞಿ ಹಾಜಿ ಮಾರಾಠಿಮೂಲೆ ವೆಬ್‌ಸೈಟನ್ನು ಅನಾವರಣಗೈದರು. ಸಂಸ್ಥೆಯ ಕೋಶಾಧಿಕಾರಿ ಅಬೂಸ್ವಾಲಿಹ್ ಹಾಜಿ ಮಾತನಾಡಿ, ಸದ್ಯಕ್ಕೆ ಮಂಗಳನಗರದಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯನ್ನು ಕಿನ್ಯದ ವಾದಿತೈಬಕ್ಕೆ ವಿಸ್ತರಿಸುವ ಯೋಜನೆ ಇದ್ದು, ಅಲ್ಲಿ ಕೂಡಾ ವಿಶಾಲ ಕ್ಯಾಂಪ ಸ್‌ನ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಸೈಯದ್ ಅಮೀರ್ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿರಾಜುದ್ದೀನ್ ಅಲಂಕಾರ್ ಮಾತನಾ ಡಿದರು, ಖಾಸಿಂ ದಾರಿಮಿ ಪ್ರಾಸ್ತಾ ವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News