ಆ್ಯಂಡ್ರಾಯ್ಡಾ ಅಪ್ಲಿಕೇಶನ್ ಆ್ಯಪ್ ಅಭಿವೃದ್ಧಿ ಕಾರ್ಯಾಗಾರ
Update: 2016-03-06 00:25 IST
ಕುಂದಾಪುರ, ಮಾ.5: ಸ್ಥಳೀಯ ಭಂಡಾರ್ಕಾರ್ಸ್ ಕಾಲೇಜಿನ ಕಂಪ್ಯೂಟರ್ ವಿಭಾಗ ಐಐಟಿ ಮದ್ರಾಸ್ ಇದರ ಸಹಯೋಗದಲ್ಲಿ ‘ಆ್ಯಂಡ್ರಾಯ್ಡಾ ಅಪ್ಲಿಕೇಶನ್ ಆ್ಯಪ್ ಡೆವಲಪ್‌ಮೆಂಟ್’ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಿತ್ತು. ಕಾರ್ಯಾಗಾರವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಹೊಸ ತಂತ್ರಜ್ಞಾನವನ್ನು ಹೆಚ್ಚೆಚ್ಚು ಅರಿತು ಬಳಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕಾಲೇಜು ಸಹ ಅವಕಾಶವನ್ನು ಒದಗಿಸಿ ಕೊಡುತ್ತದೆ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಕಲಿತು ಆಧುನಿಕ ತಾಂತ್ರಿಕ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದು ಕರೆ ನೀಡಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಾರಾಯಣ ತಂತ್ರಿ, ಕಾರ್ಯಕ್ರಮ ಸಂಚಾಲಕ ಕೆ. ಗಣೇಶ್, ಸಂಪನ್ಮೂಲ ವ್ಯಕ್ತಿಗಳಾದ ಶಿವ ಶ್ರೀವಾಸ್ತವ ಹಾಗೂ ಬಂಡನವಾಲ್ ಭಗವಾನ್ ಉಪಸ್ಥಿತರಿದ್ದರು.