×
Ad

‘ಸಾಂಪ್ರದಾಯಿಕ ನಾಟಕಗಳನ್ನು ಉಳಿಸಿ-ಬೆಳೆಸಿ’

Update: 2016-03-06 00:25 IST

ಉಡುಪಿ, ಮಾ.5: ಇಂದು ಹಾಸ್ಯ ನಾಟಕಗಳನ್ನು ಜನ ಇಷ್ಟಪಡು ವುದರಿಂದ ಸಾಂಪ್ರದಾಯಿಕ ನಾಟಕಗಳನ್ನು ನೋಡುವವರ ಸಂಖ್ಯೆ ಇಳಿಮುಖವಾಗಿದೆ.ಆದುದರಿಂದ ಸಾಂಪ್ರದಾಯಿಕ ನಾಟಕಗಳನ್ನು ಉಳಿಸಿ ಬೆಳೆಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ನಗರಸಭೆ, ತುಳು ಸಾಹಿತ್ಯ ಅಕಾಡಮಿ, ನಾಟಕ ಅಕಾಡಮಿಯ ಸಹಯೋಗದೊಂದಿಗೆ ಸುಮನಸಾ ಕೊಡವೂರು ಆಯೋಜಿಸಿದ ‘ರಂಗ ಹಬ್ಬ’ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಉದ್ಯಮಿ ಅಮೃತ್ ಶೆಣೈ ವಹಿಸಿದ್ದರು. ಈ ಸಂದರ್ಭ ಹಿರಿಯ ಪ್ರಸಾಧನ ಕಲಾವಿದ ಸೋಮನಾಥ್ ಚಿಟ್ಪಾಡಿಯವರನ್ನು ರಂಗಸಾಧಕ ಸನ್ಮಾನ ನೀಡಿ ಗೌರವಿ ಸಲಾಯಿತು.

ನೂತನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಗಣೇಶ್ ಶೇರಿಗಾರ್, ಮತ್ಸೋದ್ಯಮಿ ಸಾಧು ಸಾಲ್ಯಾನ್, ಲಯನ್ಸ್ ಪ್ರಾಂತೀಯಾಧ್ಯಕ್ಷ ಸಂಜೀವ ಕರ್ಕೇರ, ದ.ಕ. ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಉದಯಕಿರಣ್, ಕೆ.ಹರೀಶ್ ಕುಮಾರ್, ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು.

ಜೀವನ್ ಕುಮಾರ್ ಸ್ವಾಗತಿಸಿದರು. ಚಂದ್ರಕಾಂತ್ ಕಲ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಪಾಲನ್ ಅಂಬಲಪಾಡಿ ವಂದಿಸಿದರು. ಉಪಾ ಧ್ಯಕ್ಷ ಗಣೇಶ್ ರಾವ್ ಎಲ್ಲೂರುಕಾರ್ಯ ಕ್ರಮ ನಿರೂಪಿಸಿದರು. ಬಳಿಕ ‘ರಂಗ ಮಂಟಪ’ ಬೆಂಗಳೂರು ತಂಡದಿಂದ ಚಂಪಾ ಶೆಟ್ಟಿ ನಿರ್ದೇ ಶನದ ‘ಅಕ್ಕು’ ಕನ್ನಡ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News