ಭಯೋತ್ಪಾದನೆ ವಿರುದ್ಧ ಬೈಕ್ ರ್ಯಾಲಿ
ಉಳ್ಳಾಲ, ಮಾ.5: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ರಾಜ್ಯವ್ಯಾಪ್ತಿ ನಡೆಯು ತ್ತಿರುವ ಭಯೋತ್ಪಾದನೆ ವಿರುದ್ಧ ಜಿಹಾದ್ ಜನಾಂದೋಲನದ ಪ್ರಯುಕ್ತಬೈಕ್ ರ್ಯಾಲಿಯು ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ಬಾಸ್ ಉಸ್ತಾದ್ ಮಂಜನಾಡಿರವರ ನೇತೃತ್ವದಲ್ಲಿ ಅಲ್-ಮದೀನಾ ಮಂಜ ನಾಡಿಯಿಂದ ದೇರಳಕಟ್ಟೆ ಜಂಕ್ಷನ್ ತನಕ ನಡೆಯಿತು. ಕಾರ್ಯಕ್ರಮದಲ್ಲಿ ಇಸ್ಮಾಯೀಲ್ ಹಾದಿ ತಂಙಳ್ ಉಜಿರೆ ದುಆ ನೆರವೇರಿಸಿದರು. ಕೇಂದ್ರ ಮುಶಾವರ ಸದಸ್ಯರಾದ ಡಾ. ಹುಸೈನ್ ಸಖಾಫಿ ಚುಲ್ಲಿಕೋಡ್ ಭಯೋತ್ಪಾದನೆ ವಿರುದ್ಧ ಜಿಹಾದ್ ಎಂಬ ವಿಷಯದಲ್ಲಿ ಸಂದೇಶ ಭಾಷಣಗೈದರು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಎನ್.ಎಸ್. ಕರೀಂ ಧ್ವಜ ಹಸ್ತಾಂತರಿಸಿ ಉದ್ಘಾ ಟನೆಗೈದರು. ಕಾರ್ಯಕ್ರಮದಲ್ಲಿ ಅಶ್ರಫ್ ಸಖಾಫಿ ಕಿನ್ಯ, ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಡಿವಿಷನ್ ಕೋಶಾಧಿಕಾರಿ ಫಾರೂಕ್ ಸಖಾಫಿ ಮದನಿನಗರ, ಮುನೀರ್ ಸಖಾಫಿ ಉಳ್ಳಾಲ, ಇಬ್ರಾಹೀಂ ಅಹ್ಸನಿ ಮಂಜನಾಡಿ, ಸೈಯದ್ ಖುಬೈಬ್ ತಂಙಳ್ ಉಳ್ಳಾಲ ಉಪಸ್ಥಿತರಿದ್ದರು. ಡಿವಿಷನ್ ಪ್ರಧಾನ ಕಾರ್ಯ ದರ್ಶಿ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ, ವಂದಿಸಿದರು.