ಕುಡಿಯುವ ನೀರಿನ ಸೌಲಭ್ಯ ಉದ್ಘಾಟನೆ
Update: 2016-03-06 00:29 IST
ಉಡುಪಿ, ಮಾ.5: ಜಿಲ್ಲಾ ಲಯನೆಸ್ ಕ್ಲಬ್ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ಒದಗಿಸಿರುವ ಕುಡಿಯುವ ನೀರಿನ ಸೌಲಭ್ಯವನ್ನು ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ ಗವರ್ನರ್ ಶ್ರೀಧರ್ ಶೇಣವ, ಜ್ಯೋತಿ ಶೇಣವ, ಜಿಲ್ಲಾ ಲಯನೆಸ್ ಸಲಹೆಗಾರ ಜಯಕರ ಶೆಟ್ಟಿ ಇಂದ್ರಾಳಿ, ಲಯನೆಸ್ ಮೀಟ್ ಸಂಯೋಜಕ ಪ್ರಸಾದ್ ವಿ.ಶೆಟ್ಟಿ, ಜಿಲ್ಲಾ ಲಯನೆಸ್ ಸಂಯೋಜಕಿ ನಿರುಪಮಾ ಪ್ರಸಾದ್ ಶೆಟ್ಟಿ, ಜಿಲ್ಲಾ ಲಿಯೋ ಅಧ್ಯಕ್ಷೆ ಶ್ರಮ್ಯಾ ಜೆ. ಶೆಟ್ಟಿ ಉಪಸ್ಥಿತರಿದ್ದರು. ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.