×
Ad

ಪುತ್ರಿಯ ಕೊರಳು ಇರಿದ ತಂದೆ

Update: 2016-03-06 10:25 IST

ಶ್ರೀ ಚಕ್ಮೌರ್ ಸಾಹಿಬ್, ಮಾ.6: ತಂದೆಯೊಬ್ಬ ತನ್ನ ಮಗಳನ್ನು ಕಾಲುವೆ ಬದಿಗೆ ಕರೆದುಕೊಂಡು ಹೋಗಿ ಹರಿತದ ಆಯುಧದಿಂದ ಗಂಭೀರವಾಗಿ ಗಾಯಗೊಳಿಸಿದ ಘಟನೆ ವರೆದಿಯಾಗಿದೆ.

ಸ್ಥಳೀಯ ಠಾಣಾ ಅಧಿಕಾರಿ ದೇಸ್‌ರಾಜ್ ಕಳೆದ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಸರ್‌ಹಿಂದ್ ಕಾಲುವೆ ತಟದ ಥೀಮ್ ಪಾರ್ಕ್ ಸಮೀಪ ಈ ಘಟನೆ ನಡೆದಿದೆಯೆಂದು ತಿಳಿಸಿದ್ದಾರೆ.

ಘಟನೆಯ ಮಾಹಿತಿ ದೊರೆತ ಕೂಡಲೇ ಪೊಲೀಸರು ಅಲ್ಲಿಗೆ ತೆರಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಯುವತಿಯ ಕೊರಳಲ್ಲಿ ಗಂಭೀರ ಇರಿತದ ಕುರುಹು ನೋಡಿ ಕೂಡಲೇ ಚಂಡೀಗಢದ ಪಿಜಿಐಗೆ ಶಿಫಾರಸು ಮಾಡಿದ್ದಾರೆ. ಗಾಯಾಳು ಯುವತಿಯನ್ನು ಬಲವೀಂದರ್ ಸಿಂಗ್‌ರ ಪುತ್ರಿ ಮಹಕ್‌ದೀಪ್ ಕೌರ್ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News