×
Ad

ಲಾಲೂರಿಗೆ ವಿಷಕೊಡಿ, ಇಲ್ಲವೇ ಗಲ್ಲಿಗೇರಿಸಿ ಕೊಂದು ಹಾಕಿ: ಪಪ್ಪು ಯಾದವ್

Update: 2016-03-06 10:31 IST

ಹೊಸದಿಲ್ಲಿ, ಮಾ. 6: ತನ್ನ ವಿವಾದಿತ ಹೇಳಿಕೆಯಿಂದ ಯಾವಾಗಲೂ ಪ್ರಚಾರದಲ್ಲಿರುವ ಸಂಸದ ಹಾಗೂ ಜನಾಧಿಕಾರ್ ಪಕ್ಷದ ಸಂಯೋಜಕ ಪಪ್ಪು ಯಾದವ್ ರಾಷ್ಟ್ರೀಯ ಜನತಾ ದಳದ ಮುಖಂಡ ಲಾಲೂ ಪ್ರಸಾದ್ ಯಾದವ್‌ರ ವಿರುದ್ಧ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಬಿಹಾರವನ್ನು ಲೂಟಿಗೈದ ಲಾಲೂರಂತಹ ನಾಯಕರಿಗೆ ಒಂದೋ ವಿಷ ಕೊಟ್ಟು ಅಥವಾ ಗಲ್ಲಿಗೆ ಕೊಟ್ಟು ಕೊಲ್ಲಬೇಕೆಂದು ಹೇಳಿದ್ದಾರೆ.

ಲಾಲೂ ಯಾವುದೇ ಆಂದೋಲನ ಅಥವಾ ಸಮಸ್ಯೆಯ ಬಗ್ಗೆ ಆಸಕ್ತರಲ್ಲ. ಯಾಕೆಂದರೆ ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಕನ್ಹಯ್ಯಾರಿಗೆ ಸಹಾನುಭೂತಿ ತೋರಿಸುವ ಜನರಿಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಮತ್ತು ಲಾಲೂಜಿ ಕನ್ಹಯ್ಯಾರ ಕುರಿತು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಒಂದು ವೇಳೆ ಕನ್ಹಯ್ಯಾರ ಕುರಿತು ಚಿಂತೆ ಇದ್ದಿದ್ದರೆ ಎಲ್ಲದಕ್ಕಿಂತ ಮೊದಲು ರಕ್ಷಣೆಯನ್ನು ಮಾಡಲಾಗುತ್ತಿತ್ತು.

ಕನ್ಹಯ್ಯಾ ಹೊರಗೆ ಬಂದೊಡನೆ ಎಲ್ಲರೂ ಅವರನ್ನು ಭೇಟಿಯಾಗಲು ಹೋಗುತ್ತಿದ್ದಾರೆ. ಜೈಲಿನಲ್ಲಿದ್ದಾಗ ಯಾರೂ ಅವರನ್ನು ಭೇಟಿಯಾಗಲು ಹೋಗಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News