×
Ad

ಕಾಸರಗೋಡು: ಮಾರಥಾನ್ ಗೆ ಚಾಲನೆ

Update: 2016-03-06 15:14 IST

ಕಾಸರಗೋಡು, ಮಾ.6: ಆರೋಗ್ಯದೊಂದಿಗೆ ಸೌಹಾರ್ದತೆ ಎಂಬ ಸಂದೇಶದೊಂದಿಗೆ  ಕಾಸರಗೋಡಿನಲ್ಲಿ ರವಿವಾರ ಆಯೋಜಿಸಿದ್ದ  ಮಾರಥಾನ್ ನಲ್ಲಿ ನೂರಾರು   ಮಂದಿ ಪಾಲ್ಗೊಂಡಿದ್ದರು.
ಗುಡ್ ಮಾರ್ನಿಂಗ್  ಕಾಸರಗೋಡು ಆಯೋಜಿಸಿದ  ಮಾರಥಾನ್- 16 ಈ ಓಟವು  ನಗರ ಹೊರವಲಯದ ತಾಳಿಪಡ್ಪು  ಮೈದಾನದಿಂದ  ಐದು ಕಿ . ಮಿ ದೂರದ ವಿದ್ಯಾನಗರ ಸ್ಟೇಡಿಯಂ  ತನಕ ನಡೆಯಿತು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ. ಎ . ಶ್ರೀನಿವಾಸನ್  ಮಾರಥಾನ್ ಗೆ  ಚಾಲನೆ ನೀಡಿದರು.

ಮಕ್ಕಳು , ಮಹಿಳೆ ಯರು , ಗಣ್ಯರು ಸೇರಿದಂತೆ ೫೦೦ ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕರಂದಕ್ಕಾಡ್- ಹೊಸಬಸ್ಸು ನಿಲ್ದಾಣ - ನುಳ್ಲಿಪ್ಪಾಡಿ- ಅಣ೦ಗೂರು- ವಿದ್ಯಾನಗರ ಮೂಲಕ  5.1  ಕಿ . ಮಿ ದೂರದ ನಗರಸಭಾ ಸ್ಟೇಡಿಯಂ ತನಕ  ಓಟ ಆಯೋಜಿಸಿತ್ತು.
 ಕಾಸರಗೋಡಿನಲ್ಲಿ ಇದೇ ಪ್ರಥಮ ಬಾರೀ ಇಂತಹ   ಹಮ್ಮಿಕೊಳ್ಳಲಾಗಿದ್ದ  ಮಾರಥಾನ್ ನಲ್ಲಿ ಭಾಗವಹಿಸಲು ಮತ್ತು ವೀಕ್ಷಿಸಲು ನೂರಾರು ಮಂದಿ  ಉತ್ಸುಕತೆಯಿಂದ  ತಲುಪಿದ್ದರು.


ಜನ ಮೈತ್ರಿ ಪೋಲಿಸರ ಸಹಕಾರವೂ ಲಭಿಸಿದ್ದು,  ಜಿಲ್ಲೆ ಮಾತ್ರವಲ್ಲ  ಹೊರ ಜಿಲ್ಲೆಯಿಂದಲೂ ಹಲವು ಮಂದಿ ಪಾಲ್ಗೊಂಡಿದ್ದರು.

ಪುರುಷ ವಿಭಾಗದಲ್ಲಿ  ಕೋದಮಂಗಲ   ಇಂಡಿಯಾ  ಸ್ಪೋರ್ಟ್ಸ್ ನ  ಸಿ .ಸಿಜು ಪ್ರಥಮ , ಬಿನು ಪೀಟರ್  ದ್ವಿತೀಯ , ಕಾಸರಗೋಡು ಸ್ಪೋರ್ಟ್ಸ್   ಹಾಸ್ಟೆಲ್ ನ  ಎಂ .ಪಿ . ಅಗಸ್ಟಿನ್  ಮೂರನೇ ಸ್ಥಾನ  ಪಡೆದರು .


ಮಹಿಳೆಯರ ವಿಭಾಗದಲ್ಲಿ  ಕೂಡ್ಲು ಭಗವತಿ ನಗರದ  ದುರ್ಗಾಶ್ರೀ ಪ್ರಥಮ,  ಬೇಕಲ್  ಲಲಿತ್ ರೆಸಾರ್ಟ್ ನ  ಪ್ರಿಯಾಂಕ  ಎರಡನೇ ಮರ್ತ್ತು  ವಿದ್ಯಾನಗರ ಅಂಜಲಿ ಎಸ್ . ರಾವ್   ಮೂರನೇ ಸ್ಥಾನ ಪಡೆದರು .


ವಿಜೇತರಿಗೆ ತಲಾ  ಐದು ಸಾವಿರ ರೂ ., ಮೂರು ಸಾವಿರ ರೂ ., ಎರಡು ಸಾವಿರ ರೂ . ಮತ್ತು ಟ್ರೋಪಿ ,  ಪ್ರಮಾಣ ಪತ್ರ ವಿತರಿಸಲಾಯಿತು.
ಮಾರಥಾನ್  ನಲ್ಲಿ  ಪಾಲ್ಗೊಂಡ ಎಲ್ಲರಿಗೂ ಪದಕ ವಿರರಿಸಲಾಯಿತು .


ಶಾಸಕರಾದ ಇ. ಚಂದ್ರಶೇಖರನ್ , ಎನ್. ಎ . ನೆಲ್ಲಿಕುನ್ನು , ಪಿ .ಬಿ ಅಬ್ದುಲ್ ರಜಾಕ್ , ಜಿಲ್ಲಾ ಪಂಚಾಯತ್  ಸದಸ್ಯ   ಕೆ . ಶ್ರೀಕಾಂತ್ ,   ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣಿ ಜೋಸೆಫ್ ,  ಡಿ ವೈ ಎಸ್ ಪಿ  ಕೆ . ದಾಮೋದರನ್ , ಲಲಿತ್ ರೆಸಾರ್ಟ್ ನಾ  ಜನರಲ್ ಮೇನೇಜರ್   ದೇಬಾಶಿಸ್ ಚಂದ್ರ ,  ಕರ್ನಲ್ ದಿವಾನ್  ಮೊದಲಾದವರು ಬಹುಮಾನ ವಿತರಿಸಿದರು.


ಸ್ವಾಗತ  ಸಮಿತಿ ಅಧ್ಯಕ್ಷ  ಹಾರಿಶ್ ಚೂರಿ ಅಧ್ಯಕ್ಷತೆ ವಹಿಸಿದ್ದರು . ಎನ್. ಕೆ  ಪವಿತ್ರನ್ , ಬಾಲನ್ ಚೆನ್ನಿಕರೆ , ಮುಹಮ್ಮದ್ ಹಾಶೀಂ ಮೊದಲಾದವರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News