ಪುತ್ತೂರು: ಪಿಕಪ್ ಉರುಳಿ ಬಿದ್ದು ಚಾಲಕ ಸಾವು
Update: 2016-03-06 16:53 IST
ಪುತ್ತೂರು: ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರೈಲ್ವೇ ಹಳಿಯ ಮೇಲೆ ಉರುಳಿ ಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪುತ್ತೂರು ನಗರದ ಬನ್ನೂರಿನ ಕರ್ಮಲ ಎಂಬಲ್ಲಿ ಭಾನುವಾರ ನಡೆದಿದೆ. ಪುತ್ತೂರು ತಾಲೂಕಿನ ಕಬಕ ಗ್ರಾಮದ ಮುರ ನಿವಾಸಿ ಹನೀಫ್ (52) ಮೃತಪಟ್ಟ ಚಾಲಕ. ರೈಲ್ವೇ ಹಳಿಯ ಬದಿಯ ರಸ್ತೆಯಲ್ಲಿ ಪಿಕಪ್ ಸಾಗುತ್ತಿದ್ದಂತೆ ಮೇಲಿನಿಂದ ಕೆಳಗೆ ಉರುಳಿ ಬಿದ್ದಿತ್ತು. ಈ ಸಂದರ್ಭದಲ್ಲಿ ವಾಹನದೊಳಗೆ ಸಿಲುಕಿಕೊಂಡ ಹನೀಫ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಸ್ಥಳೀಯರ ನೆರವಿನಿಂದ ಹೊರತೆಗೆಯಲಾಯಿತು. ಪಿಕಪ್ ರೈಲ್ವೇ ಹಳಿಯ ಬದಿಗೆ ಉರುಳಿಬಿದ್ದ ಕಾರಣ ರೈಲ್ವೇ ಸಂಚಾರಕ್ಕೆ ಯಾವುದೇ ತೊಡಕಾಗಿಲ್ಲ. ಪುತ್ತೂರು ನಗರ ಸಂಚಾರಿ ಠಾಣೆ ಪೊಲೀಸರು ಹಾಗೂ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.