ರಿಕ್ಷಾ ರಸ್ತೆ ವಿಭಜಕಕ್ಕೆ ಡಿಕ್ಕಿ: ಪ್ರಯಾಣಿಕ ಸಾವು
Update: 2016-03-06 16:56 IST
ಪುತ್ತೂರು: ರಿಕ್ಷಾವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಶನಿವಾರ ರಾತ್ರಿ ಪುತ್ತೂರು ನಗರದ ಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ದಯಾನಂದ(37) ಮೃತಪಟ್ಟ ಪ್ರಯಾಣಿಕ. ರಿಕ್ಷಾ ಚಾಲಕ ಗೋಪಾಲ ಆಚಾರಿ ಎಂಬಾತ ಕುಡಿದು ಅತಿವೇಗದಿಂದ ರಿಕ್ಷಾವನ್ನು ಚಲಾಯಿಸಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡಿದಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ದಯಾನಂದ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪುತ್ತೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.