×
Ad

ಚರ್ಚ್‌ನಲ್ಲಿ ದಾಂಧಲೆ ನಡೆಸಿ ಮಹಿಳೆಯರ ಬಟ್ಟೆಗಳನ್ನು ಹರಿದ ಬಜರಂಗಿ ಗೂಂಡಾಗಳು

Update: 2016-03-06 17:15 IST

 ರಾಯಪುರ,ಮಾ.6: ಇಲ್ಲಿಯ ಖಮರ್ದಿ ಪ್ರದೇಶದಲ್ಲಿಯ ಚರ್ಚೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ ಬಜರಂಗ ದಳಕ್ಕೆ ಸೇರಿದವರೆನ್ನಲಾದ ಗೂಂಡಾಗಳ ಗುಂಪು ಪ್ರಾರ್ಥನೆಗಾಗಿ ಸಮಾವೇಶಗೊಂಡಿದ್ದ ಮಹಿಳೆಯರ ಬಟ್ಟೆಗಳನ್ನು ಹರಿದೆಸೆದು ಅಟ್ಟಹಾಸ ಮೆರೆದಿದೆ.

ಬಜರಂಗ ದಳ ಕಾರ್ಯಕರ್ತರ ಗುಂಪೊಂದು ಚರ್ಚ್‌ಗೆ ನುಗ್ಗಿ ದಾಂಧಲೆ ಆರಂಭಿಸಿದ್ದಲ್ಲದೆ ಮಹಿಳೆಯರ ಬಟ್ಟೆಗಳನ್ನೂ ಹರಿದಿದ್ದಾರೆ. ಎರಡು ವರ್ಷದ ಮಗುವೊಂದನ್ನು ನೆಲಕ್ಕೆಸೆದು ಕ್ರೌರ್ಯ ಮೆರೆದಿದ್ದಾರೆ. ದಾಳಿಕೋರರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದರು. ಅವರು ಮತಾಂತರದ ಆರೋಪ ಮಾಡುತ್ತಿದ್ದರು ಎಂದು ಛತ್ತೀಸಗಡ ಕ್ರಿಶ್ಚಿಯನ್ ವೇದಿಕೆಯ ಅಧ್ಯಕ್ಷ ಅರುಣ್ ಪನ್ನಾಲಾಲ್ ಸುದ್ದಿಸಂಸ್ಥೆಗೆ ತಿಳಿಸಿದರು.

ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಛತ್ತೀಸ್‌ಗಡದಲ್ಲಿ ಬಿಜೆಪಿ ಆಡಳಿತವಿದೆ. ಮುಖ್ಯಮಂತ್ರಿ ರಮಣ ಸಿಂಗ್ ಅವರು ಘಟನೆಯ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಪೊಲೀಸರು ದಾಳಿಕೋರರನ್ನು ಬಂಧಿಸಿದ್ದಾರೆ.

ಛತ್ತೀಸಗಡದಲ್ಲಿ ಚರ್ಚಗಳ ಮೇಲೆ ಬಲಪಂಥೀಯ ಗುಂಪುಗಳಿಂದ ದಾಳಿಗಳು ನಡೆಯುವುದು ಹೊಸದೇನಲ್ಲ. ಕಳೆದ ಐದು ವಾರಗಳಲ್ಲಿ ಬಲಪಂಥೀಯ ಗುಂಪುಗಳು ಚರ್ಚ್‌ಗೆ ಹೋಗುವವರ ಮೇಲೆ ದಾಳಿಗಳನ್ನು ನಡೆಸಿರುವ ನಾಲ್ಕು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News