ಇಂಜಿನಿಯರಿಂಗ್ ಡಿಗ್ರಿ ಪಡೆದು ಆನೆಯ ಮಾವುತನಾದ ಹರಿಕೃಷ್ಣ !
ತೃಶೂರ್, ಮಾರ್ಚ್.6:ಹರಿಕೃಷ್ಣ ನಂಬೂದಿರಿಗೆ ಅನೆಯೆಂದರೆ ಜೀವ. ಜಾತ್ರೆ ವೇಳೆ ಆನೆಯನ್ನು ಕಾಣುವಾಗ ಅವರಿಗೆ ಎಲ್ಲಿಲ್ಲದ ಆತ್ಮಸಂಬಂಧವಾಗಿ ಪರಿವರ್ತನೆಯಾಗುತ್ತಿತ್ತು. ಆದ್ದರಿಂದ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪ್ರಥಮ ಶ್ರೇಣಿಯಲ್ಲಿ ಗಳಿಸಿದರೂ ಕೈಯಲ್ಲಿ ಬೆತ್ತ ಹಿಡಿದು ಮಾವುತನಾದರು.
ಈಗ ಮಂಗಲಾಕುನ್ನು ಕೃಷ್ಣಕುಟ್ಟಿ ಎಂಬ ಆನೆಯ ಒಂದನೆ ಮಾವುತನಾಗಿದ್ದಾರೆ. ಬೇರೆ ಯಾವ ಕೆಲಸ ಸಿಕ್ಕಿದರೂ ಅವೆಲ್ಲವನ್ನೂ ಬಿಟ್ಟು ಮುಂದಿನ ಜೀವನ ಮಾವುತನಾಗಿರುವೆ ಎಂದು ಇಪ್ಪತ್ತನಾಲ್ಕು ವರ್ಷ ಪ್ರಾಯದ ನಂಬೂದಿರಿ ಹೇಳುತ್ತಾರೆ. ಯಾಕೆಂದರೆ ಆನೆ ಅವರಿಗೆ ಅಷ್ಟು ಇಷ್ಟದ ಪ್ರಾಣಿಯಾಗಿದೆ. ತೃಶೂರ್ ವಡಕ್ಕ ಮಠದ ಐಟಿಐಯಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಡಿಪ್ಲೊಮಾವನ್ನು 2010ರಲ್ಲಿ ಪಾಸಾಗಿದ್ದಾರೆ. ಆನಂತರ ಕೇಬಲ್ ಟಿವಿ ಚ್ಯಾನೆಲ್‌ನಲ್ಲಿ ಟೆಕ್ನಿಷನ್ ಆದರು. ಆದರೆ ಎಳೆವೆಯಲ್ಲೇ ಅವರಿಗೆ ಆನೆಯೆಂದರೆ ಭಾರೀ ಪ್ರೀತಿ.
ಕಾಳಿದಾಸ್ ಎಂಬ ಆನೆಯ ಮೂರನೆ ಮಾವುತನಾಗಿ ಕೆಲಸ ಆರಂಭಿಸಿದ ಅವರು ನಂತರ ರಾಮಚಂದ್ರ ಎಂಬ ಆನೆಯ ಮೂರನೆ ಮಾವುತನಾದರು. 2014ರಲ್ಲಿ ಮಂಗಲಕುನ್ನು ಕೃಷ್ಣನ್ ಕುಟ್ಟಿ ಆನೆಯ ಮೊದಲನೆ ಮಾವುತ ಆದರು.
ಚಿಕ್ಕಂದಿನಲ್ಲಿಯೇ ತಂದೆ ಮತ್ತು ಅಜ್ಜನ ಜೊತೆ ಜಾತ್ರೆಯಲ್ಲಿ ಆನೆಯನ್ನು ನೋಡಿ ಅದರಲ್ಲಿ ಮಮತೆ ಉಕ್ಕಿತ್ತು. ಗಲ್ಫ್‌ನಲ್ಲಿ ನೌಕರಿ ಅವಕಾಶ ಇದ್ದರೂ ಅದನ್ನು ತಿರಸ್ಕರಿಸಿದ ಹರಿಕೃಷ್ಣ ನಂಬೂದಿರಿ ಮಾವುತನಾಗಿ ಈಗ ವರ್ಷದಲ್ಲಿ 150ಕ್ಕೂ ಹೆಚ್ಚು ಜಾತ್ರೆಗಳಲ್ಲಿ ಭಾಗವಹಿಸುತ್ತಾರೆ. ಸಹೋದರ ವಿಜಯಕುಮಾರ್ ಬೆಂಗಳೂರಿನಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರ್ ಆಗಿದ್ದಾರೆ.