ಶ್ರೀನಿವಾಸಪುರ; ಕಿಡಿಗೇಡಿಗಳಿಂದ ಬೆಂಕಿ, ಮಾವಿನ ತೋಪು ನಾಶ
ತಾಲ್ಲೂಕಿನ ಜೆ.ವಿ.ಕಾಲೋನಿ ವ್ಯಾಪ್ತಿಯಲ್ಲಿ ಬರುವ ಕಾಲೋನಿ ನಿವಾಸಿಗಳ ಮಾವಿನ ತೋಪಿಗೆ ಕಿಡಿಗೇಡಿಗಳಿಂದ ಬೆಂಕಿ ಮಾವಿನ ತೋಪು ನಾಶ.
ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೆ.ವಿ.ಕಾಲೋನಿ ನಿವಾಸಿಗಳಾದ ಗುರ್ರಮ್ಮ ಕೋಂ ಗಂಗಪ್ಪ, ತಿಮ್ಮಕ್ಕ ಕೋಂ ದೊಡ್ಡವೆಂಕಟೇಶಪ್ಪ, ಚಿನ್ನಯ್ಯ ಬಿನ್ ನಡಿಬೋವಿ, ಪೆದ್ದಪ್ಪಯ್ಯ ಬಿನ್ ಮುನಿಶಾಮಿ, ಚಿನ್ನಪ್ಪಯ್ಯ ಬಿನ್ ಚಿಕ್ಕನಾರಾಯಣಪ್ಪ, ವೆಂಕಟೇಶಪ್ಪ ಬಿನ್ ಗುರ್ಲಪ್ಪ, ಡಿ.ಎನ್.ನಾರಾಯಣಸ್ವಾಮಿ ಬಿನ್ ನಾರೆಪ್ಪ, ಹನುಮಕ್ಕ, ಪೂಜಾರಿ ರವರ ತೋಟಗಳು ಬೆಂಕಿಯಿಂದ ನಾಶವಾಗಿವೆ. ಈ ತೋಟಗಳೆಲ್ಲವೂ ಜೆ.ವಿ.ಕಾಲೋನಿಯಲ್ಲಿ ವಾಸಸ್ಥರದೆಂದು ತಿಳಿದು ಬಂದಿದೆ. ಮಾವಿನ ತೋಪಿಗೆ ಬೆಂಕಿ ಬಿದ್ದು ಸುಮಾರು 15 ಎಕರೆ ವ್ಯಾಪ್ತಿಯಲ್ಲಿ ಬೆಳೆಯಲಾಗಿರುವ ಮಾವಿನ ತೋಟಕ್ಕೆ ಹಾನಿಯಾಗಿದೆ. ಈ ಸಂಧರ್ಭದಲ್ಲಿ ಭೋವಿ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾತನಾಡಿ ಕಿಡಿಗೇಡಿಗಳಿಂದ ಈ ಕೃತ್ಯವಾಗಿದೆ. ಇದರಿಂದ ರೈತರು ಹಾನಿಯನ್ನು ಅನುಭವಿಸಿದಂತಾಗಿದೆ. ಸದರಿ ರೈತರು ಕೂಲಿಯನ್ನು ಮಾಡಿಕೊಂಡು, ವರ್ಷಕ್ಕೊಂದು ಬಾರಿ ಬರುವ ಆದಾಯಕ್ಕಾಗಿ ಎದರು ನೋಡುತ್ತಿದ್ದರು ಆದರೆ ಇದರಿಂದ ಅವರಿಗೆ ತೀರದ ನಷ್ಟ ಉಂಟಾಗಿದೆ ಇದರಿಂದ ಸರ್ಕಾರದಿಂದ ಸೂಕ್ತ ಪರಿಹಾರವನ್ನು ನೀಡಿ, ಈ ಕೃತ್ಯವೆಸಗಿದವರನ್ನು ಶೀಘ್ರವೇ ಬಂಧಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಮತ್ತು ಬಡವರ ರೋಧನೆಯನ್ನು ಆಲಿಸಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಮತ್ತು ಹಾನಿಗೊಳಗಾದ ರೈತ ಕುಟುಂಬಗಳು ಮತ್ತು ಗ್ರಾಮಸ್ಥರು ಸ್ಥಳದಲ್ಲಿದ್ದು ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು.