×
Ad

ಮಂಗಳೂರು; ಸರಕಾರಿ ಉದ್ಯೋಗಾವಕಾಶಗಳ ಮಾಹಿತಿ ಶಿಬಿರ

Update: 2016-03-06 22:19 IST

ಮಂಗಳೂರು, ಮಾ. 6: ಉತ್ತಮ ಭವಿಷ್ಯದ ಗುರಿ ಸಾಧನೆಗಾಗಿ ವಿದ್ಯಾರ್ಥಿಗಳಿಗೆ ನಿಷ್ಠೆ, ಬದ್ಧತೆ ಹಾಗೂ ಕಠಿಣ ಪರಿಶ್ರಮ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಜಮೀಯ್ಯತುಲ್ ಲಾಹ್ ಮಂಗಳೂರು ನಗರ ಘಟಕ ವತಿಯಿಂದ ಕಂಕನಾಡಿಯ ಕಮ್ಯೂನಿಟಿ ಹಾಲ್‌ನಲ್ಲಿ ರವಿವಾರ ಸಂಜೆ ನಡೆದ ಕೇಂದ್ರ ಸರಕಾರಿ ಉದ್ಯೋಗಾವಕಾಶಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ಮಾರ್ಗದರ್ಶನ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಕೈಝರ್ ಎಂ.ಖಾನ್, ಪಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್ಲ ಶರ್ೀ ಉಪಸ್ಥಿತರಿದ್ದರು.
ಜಮೀಯತುಲ್ ಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷ ಹಾಗೂ ನ್ಯಾಯವಾದಿ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಮುಹಮ್ಮದ್ ಹನ್ೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಝುಬೇರ್ ಶಾಹ್ ವಂದಿಸಿದರು.
ಬೆಳಗ್ಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜಮೀಯ್ಯತುಲ್ ಫಲಾಹ್ ದ.ಕ.-ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ಲತೀಫ್ ಸಾಹೇಬ್, ಸರಕಾರಿ ಉದ್ಯೋಗಗಳ ಪ್ರಾಮುಖ್ಯತೆ ಬಗ್ಗೆ ಸಮುದಾಯಕ್ಕೆ ಅರಿವು ಇಲ್ಲದಿರುವುದರಿಂದ ಸರಕಾರಿ ಉದ್ಯೋಗಗಳಿಗೆ ಯಾರೂ ಪ್ರಯತ್ನಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಿಬಿರ ಆಯೋಜಿಸಲಾಗಿದ್ದು, ಇದರ ಸದುಪಯೋಗ ಎಲ್ಲರೂ ಪಡೆಯುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಮಾತನಾಡಿ, ಮುಸ್ಲಿಂ ಸಮುದಾಯದ ವಿದ್ಯಾವಂತರು ಸರಕಾರಿ ಉದ್ಯೋಗಳನ್ನು ಪಡೆದು ದೇಶ ಸೇವೆ ಮಾಡುವುದರ ಜೊತೆಗೆ ಸಮುದಾಯದ ಸೇವೆಯನ್ನೂ ಮಾಡುವಂತಾಗಬೇಕು ಎಂದರು. ಜಮೀಯ್ಯತುಲ್ ಫಲಾಹ್ ಸಂಘಟನೆಯ 28 ವರ್ಷಗಳ ಸಾಧನೆ ಹಾಗೂ ಸಾಮಾಜಿಕ, ಶೈಕ್ಷಣಿಕ ಸಹಿತ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯ ಬಗ್ಗೆ ವಿವರಿಸಿದರು.
ಸ್ವ ಸಬಲೀಕರಣ ವಿಷಯದಲ್ಲಿ ಪ್ರೊ.ಸರ್ಫರಾಝ್ ಹಾಶಿಮ್ ಮಾತನಾಡಿದರೆ, ನಾಗರಿಕ ಸೇವಾ ಹುದ್ದೆಗಳು ಮತ್ತು ಸರಕಾರಿ ಉದ್ಯೋಗಾವಕಾಶಗಳ ಬಗ್ಗೆ ಪ್ರೊ.ಹಬೀಬುರ್ರಹ್ಮಾನ್ ಹಾಗೂ ಗುರಿ ನಿರ್ಧಾರ ಕುರಿತು ಪ್ರೊ.ನಬೀಲ್ ಅಹ್ಮದ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News