‘ನಗರೋತ್ಥಾನ ಯೋಜನೆ: ಪುತ್ತೂರು ನಗರಸಭೆಗೆ 15 ಕೋ.ರೂ. ಅನುದಾನ’
Update: 2016-03-06 23:37 IST
ಪುತ್ತೂರು, ಮಾ.6: ಈ ಬಾರಿಯ 3ನೆ ನಗರೋತ್ಥಾನ ಯೋಜನೆ ಯಲ್ಲಿ ಪುತ್ತೂರು ನಗರಸಭೆಗೆ 15 ಕೋ.ರೂ. ಅನುದಾನ ಮಂಜೂರಾಗಲಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಕೆಎಎಂಎಸ್ ಅಧಿಕಾರಿಗಳ ಹುದ್ದೆಯನ್ನು ಕೆಪಿಎಸ್‌ಸಿ ಮೂಲಕ ಭರ್ತಿಗೊಳಿಸಲಾಗುವುದು. ಪುತ್ತೂರು ಸೇರಿದಂತೆ ಎಲ್ಲಾ ನಗರಸಭೆಗಳಿಗೂ ಕೆಎಎಂಎಸ್ ಪದವಿಯ ಪೌರಾಯುಕ್ತರು ನೇಮಕಗೊಳ್ಳಲಿದ್ದಾರೆ. ಈಗ ಅಧಿಕಾರಿಗಳ ಕೊರತೆಯಿಂದ ಪೂರ್ಣ ಪ್ರಮಾಣದ ಪೌರಾಯುಕ್ತರ ನೇಮಕವಾಗಿಲ್ಲ ಎಂದು ತಿಳಿಸಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲುಲ್ ರಹೀಂ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಅರ್ಷದ್ ದರ್ಬೆ, ಕಾಂಗ್ರೆಸ್ ಮುಂದಾಳು ಶ್ರೀರಾಂ ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.