×
Ad

ಹೋಳಿ ಕುಣಿತದ ವಿಚಾರ ಸಂಕಿರಣ-ದಾಖಲೀಕರಣ

Update: 2016-03-06 23:42 IST

ಹಿರಿಯಡ್ಕ, ಮಾ.6: ಹೋಳಿ ಕುಣಿತ ಮೂಲಸಂಪ್ರದಾಯವನ್ನು ಮರೆಯಬಾರದು. ಈ ಕಲೆಯನ್ನು ಸಮಾಜದ ಮುಖ್ಯವಾಹಿನಿಗೆ ತಂದು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಹಿರಿಯಡ್ಕ ಮೂಡು ಅಂಜಾರು ಶ್ರೀದುರ್ಗಾಪರಮೇಶ್ವರಿ ಮರಾಠಿ ಸಮುದಾಯ ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಂಘದ ಆವರಣ ದಲ್ಲಿ ರವಿವಾರ ಆಯೋಜಿಸಲಾದ ಹೋಳಿ ಕುಣಿತದ ವಿಚಾರ ಸಂಕಿರಣ, ದಾಖಲೀಕರಣ ಹಾಗೂ ಯಕ್ಷಗಾನ ಬಣ್ಣಗಾರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾ ಡಿದರು.

ಜಿಲ್ಲಾ ಮರಾಠಿ ಸಮಾಜದ ಅಧ್ಯಕ್ಷ ನರಸಿಂಹ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕೋಟ ವಿವೇಕ ಪದವಿ ಕಾಲೇಜಿನ ಉಪನ್ಯಾಸಕ ಸಂಜೀವ ನಾಯ್ಕಾ ಹೋಳಿ ಕುಣಿತದ ಬಗ್ಗೆ ಉಪನ್ಯಾಸ ನೀಡಿದರು. ಇದೇ ವೇಳೆ ನಾಟಿವೈದ್ಯ ಮಹಾಬಲ ನಾಯ್ಕಾರನ್ನು ಸನ್ಮಾನಿಸಲಾಯಿತು.

ತೀರ್ಥಹಳ್ಳಿ ಶ್ರೀಮಹಾಮಾಯಿ ಹೋಳಿ ಕುಣಿತ ತಂಡ, ಬೆಳಿಂಜೆ ಶ್ರೀ ದುರ್ಗಾಪರಮೇಶ್ವರಿ ಹೋಳಿ ಕುಣಿತ ತಂಡದಿಂದ ಹೋಳಿ ಕುಣಿತ ಪ್ರಾತಕ್ಷಿಕೆ, ಗಣೇಶ ನಾಯ್ಕಿ ಚೇರ್ಕಾಡಿಯವರಿಂದ ಹವ್ಯಾಸಿ ಯಕ್ಷಗಾನ ಕಲಾವಿದರಿಗೆ ಬಣ್ಣಗಾರಿಕೆ ಹಾಗೂ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು. ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ, ಸದಸ್ಯೆ ದಿವ್ಯಾ, ತಾಪಂ ಸದಸ್ಯ ಲಕ್ಷ್ಮೀನಾರಾಯಣ ನಾಯ್ಕಾ, ರಾಜ್ಯ ಖಜಾನೆಯ ನಿವೃತ್ತ ನಿರ್ದೇಶಕ ಕೆ.ಕೆ.ನಾಯ್ಕಾ, ಶ್ರೀದುರ್ಗಾ ಪರಮೇಶ್ವರಿ ಮರಾಠಿ ಸಮುದಾಯ ಕಲಾ ಸಂಘದ ಗೌರವಾ ಧ್ಯಕ್ಷ ವಿಠಲ ನಾಯ್ಕಾ ಉಪಸ್ಥಿತರಿದ್ದರು.

ಶ್ರೀದುರ್ಗಾಪರಮೇಶ್ವರಿ ಮರಾಠಿ ಸಮುದಾಯ ಕಲಾ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕಿ ಸ್ವಾಗತಿಸಿದರು. ಕಾರ್ಯ ದರ್ಶಿ ಸುಧಾಕರ ನಾಯ್ಕಾ ವಂದಿಸಿದರು. ಗುರುರಾಜ ಸಾಮಗ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News