ಎಂಎಚ್370 ವಿಮಾನದ ಶೋಧ ಮುಂದುವರಿಯಲಿ
Update: 2016-03-06 23:49 IST
ಕೌಲಾಲಂಪುರ, ಮಾ. 6: ನಿಗೂಢವಾಗಿ ನಾಪತ್ತೆಯಾಗಿರುವ ಎಂಎಚ್370 ವಿಮಾನದ ಎರಡು ವರ್ಷಗಳ ಶೋಧ ಕಾರ್ಯ ಜೂನ್ ಗಡುವಿನ ಬಳಿಕವೂ ಮುಂದುವರಿಯಬೇಕು ಎಂದು ವಿಮಾನದಲ್ಲಿದ್ದ ಪ್ರಯಾಣಿಕರ ಸಂಬಂಧಿಕರು ಹೇಳಿದ್ದಾರೆ.
ಮೊಝಾಂಬಿಕ್ ದೇಶದ ಸಮುದ್ರ ತೀರದಲ್ಲಿ ಕಂಡು ಬಂದಿರುವ ವಿಮಾನದ ಅವಶೇಷವೊಂದು ವಿಮಾನ ನಾಪತ್ತೆ ಹಿಂದಿನ ನಿಗೂಢತೆಯನ್ನು ಪರಿಹರಿಸುವ ಭರವಸೆ ಹುಟ್ಟಿಹಾಕಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ವಿಮಾನವೊಂದರ ಅವಶೇಷ ಕಂಡುಬಂದಿರುವ ಹಿನ್ನೆಲೆಯಲ್ಲಿ, ಆರಂಭಿಕ ಹಂತದಲ್ಲಿ ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಪ್ರಯಾಣಿಕರ ಹಲವು ಸಂಬಂಧಿಕರು ತನಿಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
‘‘ಈ ಹಿಂದೆಂದೂ ಮಾಡಿರದ ಲೆಕ್ಕಾಚಾರದ ಆಧಾರದಲ್ಲಿ ಹೆಚ್ಚಿನ ತನಿಖೆಯನ್ನು ನಡೆಸಲಾಗಿತ್ತು’’ ಎಂದು ಗ್ರೇಸ್ ಸುಬಾತಿರೈ ನತನ್ ಹೇಳುತ್ತಾರೆ. ಅವರ ತಾಯಿ ಆ್ಯನ್ ಡೈಸಿ 2014 ಮಾರ್ಚ್ 8ರಂದು ಕಾಣೆಯಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.