ಸೌಹಾರ್ದ ಸಂಗಮಗಳು ನಿತ್ಯ ಸೌಹಾರ್ದಕ್ಕೆ ವೇದಿಕೆಯಾಗಲಿ: ಸಚಿವ ರೈ
ಉಳ್ಳಾಲ, ಮಾ.7: ಸರ್ವಧರ್ಮ ಸೌಹಾರ್ದ ಸಂಗಮಗಳು ನಿತ್ಯ ಸೌಹಾರ್ದ ಕಾಪಾಡುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.
ಸಾಲೆತ್ತೂರು ಸಮೀಪದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ವಲಿಯುಲ್ಲಾಹಿ (ಖ.ಸಿ.) ರವರ ಉರೂಸ್ ಮುಬಾರಕ್ ಪ್ರಯುಕ್ತ ಅಯೋಜಿಸಿದ್ದ ಸರ್ವಧರ್ಮ ಸೌಹಾರ್ದ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಕ್ಫ್ ಬೋರ್ಡ್ ಮಂಡಳಿಯ ಸದಸ್ಯ ಶಾಫಿ ಸಅದಿ ಬೆಂಗಳೂರು ಮಾತನಾಡಿ, ಸೌಹಾರ್ದ, ಸಹಬಾಳ್ವೆಯು ಮರೀಚಿಕೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಇಂತಹ ಸೌಹಾರ್ದ ಸಂಗಮಗಳ ಅನಿವಾರ್ಯತೆ ಇದೆ ಎಂದರು.
ವಿ.ಎಸ್.ಅಬ್ದುಲ್ ಹಮೀದ್ ತಂಙಳ್ ಉದ್ಯಾವರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಎಸ್‌ವೈಎಸ್ ಕರ್ನಾಟಕ ರಾಜ್ಯ ಪ್ರ. ಕಾರ್ಯದರ್ಶಿ ಎಂ.ಎಸ್.ಎಂ.ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಎಲ್ಲ ಧರ್ಮಗಳೂ ಶಾಂತಿಯನ್ನೇ ಪ್ರತಿಪಾದಿಸುತ್ತಿರುವಾಗ ಶಾಂತಿಯನ್ನು ಕದಡುವ ಧರ್ಮದ್ರೋಹಿಗಳನ್ನು ಸರ್ವಧರ್ಮೀಯರೂ ಸೇರಿ ಮಟ್ಟ ಹಾಕಬೇಕು ಎಂದರು. ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರ್ರಶೀದ್ ಹಾಜಿ, ಖತೀಬ್ ಅಬ್ದುಲ್ ಜಲೀಲ್ ಸಖಾಫಿ ನೀಲಗಿರಿ, ಸುಫ್ಯಾನ್ ಸಖಾಫಿ, ಕರ್ನಾಟಕ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ತಾಪಂ ಸದಸ್ಯ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕೊಳ್ನಾಡು ತಾಪಂ ಸದಸ್ಯ ನಾರಾಯಣ ಶೆಟ್ಟಿ, ಕುಲ್ಯಾರು, ವರ್ಕಾಡಿ ಗ್ರಾಪಂ ಅಧ್ಯಕ್ಷ ಪಿ.ಬಿ.ಅಬ್ದುಲ್ ಮಜೀದ್, ಮುಡಿಪು ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್.ಕೆ.ಅಬ್ದುಲ್ ಖಾದರ್ ಹಾಜಿ, ಕೊಳ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಅಬ್ದುಲ್ಲ, ಮಾಜಿ ತಾಪಂ ಸದಸ್ಯ ಮಾಧವ ಮಾವೆ, ಕಲ್ಲಡ್ಕ ಎಸ್.ಕೆ. ಬೀಡಿ ಮಾಲಕ ಕೆ.ಎಸ್.ಮುಸ್ತಫಾ, ಕೊಳ್ನಾಡು ಗ್ರಾಪಂ ಸದಸ್ಯ ಇಬ್ರಾಹೀಂ ಮಣ್ಣಗದ್ದೆ, ಅಮೀರ್ ಹಾಜಿ, ಕಲ್ಲಡ್ಕ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ, ಸಾಲೆತ್ತೂರು ಗ್ರಾಪಂ ಸದಸ್ಯರಾದ ವಿ.ನಾರಾಯಣ ಪೂಜಾರಿ ವಾಲ್ತಾಜೆ, ಮುಹಮ್ಮದ್ ಮಂಚಿ, ಮಾಜಿ ತಾಪಂ ಸದಸ್ಯ ಮುಹಮ್ಮದ್ ಸಾಲೆ, ನಡಿಬೈಲ್ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹೀಂ ಹಾಜಿ, ಸಾಲೆತ್ತೂರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್, ಪಾತೂರು ಜುಮಾ ಮಸೀದಿಯ ಅಧ್ಯಕ್ಷ ಪಿ.ಬಿ. ಅಬೂಬಕರ್, ನಾಟೆಕಲ್ ಬದ್ರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಮದನಿ, ಪಂಜರೆಕೋಡಿ ಜುಮಾ ಮಸೀದಿಯ ಅಧ್ಯಕ್ಷ ಕೆ.ಅಬ್ದುಲ್ ಮಜೀದ್, ಬಾಳೆಪುಣಿ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹೀಂ ಹಾಜಿ, ಉದ್ಯಮಿ ಕೆ.ಎಸ್.ಬಾಪಕುಂಞಿ, ಕಟ್ಟತ್ತಿಲ ಜುಮಾ ಮಸೀದಿಯ ಗೌರವಾಧ್ಯಕ್ಷ ಕೆ.ಎಂ.ಉಮರ್ ಮದನಿ, ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಅಗರಿ, ಉಪಾಧ್ಯಕ್ಷ ಮುಹಮ್ಮದ್ ಕುಂಞಿ, ಪ್ರ. ಕಾರ್ಯದರ್ಶಿ ಪಿ.ಇಬ್ರಾಹೀಂ ನಾಟೆಕಲ್, ಕೋಶಾಧಿಕಾರಿ ಕೆ.ಪಿ.ಅಬ್ದುಲ್ ಖಾದರ್, ಬಾಳೆಪುಣಿ ಎಸ್‌ವೈಎಸ್ ಅಧ್ಯಕ್ಷ ಸಿ.ಎಚ್.ಮುಹಮ್ಮದ್ ಹಾಜಿ, ಪಿ.ಟಿ. ಇಬ್ರಾಹೀಂ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಸಾಲೆತ್ತೂರು ಗ್ರಾಪಂ ಸದಸ್ಯ ಎ.ಸಿ.ಮೊಯ್ದಿನ್ ಕುಂಞಿ ಸ್ವಾಗತಿಸಿದರು. ಕಟ್ಟತ್ತಿಲ ಜುಮಾ ಮಸೀದಿಯ ಕಾರ್ಯದರ್ಶಿ ಕೆ.ಎಂ.ಮುಹಿಯುದ್ದೀನ್ ಮದನಿ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.