ಪಡುಪಣಂಬೂರು ಶ್ರೀಪಾಶ್ವನಾಥ ಕಲ್ಲು ಬಸದಿಯಲ್ಲಿ ನಿಧಿ ಶೋಧ ಯತ್ನ
ಮುಲ್ಕಿ, ಮಾ.7: ಇಲ್ಲಿನ ಪಡುಪಣಂಬೂರು ಶ್ರೀಪಾಶ್ವನಾಥ ಕಲ್ಲು ಬಸದಿಯಲ್ಲಿ ಯಾರೋ ದುಷ್ಕರ್ಮಿಗಳು ವಾಮಾಚಾರ ನಡೆಸಿ ಗರ್ಭಗುಡಿಯನ್ನು ಅಗೆದು ನಿಧಿ ಶೋಧ ನಡೆಸಿರುವ ಘಟನೆ ನಿನ್ನೆ ತಡರಾತ್ರಿ ನಡೆಸಿದೆ.
ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಈ ಬಸದಿಯಲ್ಲಿ ಕಳದ ಮೂರು ವರ್ಷಗಳಲ್ಲಿ ಇದು ದುಷ್ಕರ್ಮಿಗಳು ಮೂರನೆ ಬಾರಿ ನಿಧಿ ಶೋಧಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಕಲ್ಲು ಬಸದಿಯ ಸುತ್ತ ಉಪ್ಪು, ಅರಶಿನ ಹುಡಿ, ಕುಂಕುಮ ಹಾಗೂ ಬಣ್ಣ ಬಣ್ಣಗಳ ಹುಡಿಗಳು ಕಂಡುಬಂದಿದ್ದು ದುಷ್ಕರ್ಮಿಗಳು ವಾಮಾಚಾರ ನಡೆಸಿ ಬಳಿಕ ನಿಧಿ ಶೋಧನೆಯಲ್ಲಿ ತೊಡಗಿರ ಬೇಕು ಎಂದು ಶಂಕಿಸಲಾಗಿದೆ. ಸುಮಾರು 45 ಅಡಿ ಆಳದವರೆಗೆ ಬಸದಿಯ ಗರ್ಭಗುಡಿಯ ನ್ನು ಅಗೆಯಲಾಗಿದೆ.
ಈ ಸಂಬಂಧ ಮುಲ್ಕಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಈ ಹಿಂದೆ ಎರಡು ಭಾರಿ ನಡೆದಿತ್ತು ನಿಧಿ ಶೋಧ ಯತ್ನ ಪಡುಪಣಂಬೂರು ಶ್ರೀ ಪಾಶ್ವನಾಥ ಸ್ವಾಮಿಯ ಗರ್ಭ ಗುಡಿಯನ್ನು ಈ ಹಿಂದೆ ಎರಡು ಬಾರಿ ಹಾಳುಗೆಡವಲಾಗಿತ್ತು. ಈ ಬಗ್ಗೆ ಮುಲ್ಕಿ ಪೊಲೀಸರಿಗೆ ದೂರು ನೀಡಲಾಗಿತ್ತಾದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿರುವುದು ಇಂತಹ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.