ಹೋರಾಟದ ಮೂಲಕ ಕಾರ್ಮಿಕರು ಪಡೆದ ಹಕ್ಕುಗಳನ್ನು ಉಳಿಸಲು ಮತ್ತೆ ಸಂಘಟಿತ ಹೋರಾಟ ಅನಿವಾರ್ಯ - ಕೆ . ಪಿ ರಾಜೇಂದ್ರನ್
ಕಾಸರಗೋಡು : ಹೋರಾಟದ ಮೂಲಕ ಕಾರ್ಮಿಕರು ಪಡೆದ ಹಕ್ಕುಗಳನ್ನು ಉಳಿಸಲು ಮತ್ತೆ ಸಂಘಟಿತ ಹೋರಾಟ ಅನಿವಾರ್ಯ ಎಂದು ಎ. ಐ . ಟಿ . ಸಿ ರಾಜ್ಯ ಕಾರ್ಯದರ್ಶಿ ಕೆ . ಪಿ ರಾಜೇಂದ್ರನ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ಕಾಸರಗೋಡಿನಲ್ಲಿ ಕೇರಳ ಕೋ - ಅಪರೇಟಿವ್ ಎಂಪ್ಲೋಯಿಸ್ ಕೌನ್ಸಿಲ್ ( ಎ ಐ ಟಿ ಯು ಸಿ ) ಕಾರ್ಮಿಕ ಸಂಘಟನೆಯ ೧೩ ನೇ ರಾಜ್ಯ ಸಮ್ಮೇಳ ದಂಗವಾಗಿ ನಡೆದ ಪ್ರತಿನಿಧಿ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಮಿಕರ ಹಕ್ಕುಗಳನ್ನು ಕಸಿಯಲು ಕೇಂದ್ರ - ರಾಜ್ಯ ಸರಕಾರ ಹುನ್ನಾರ ನಡೆಸುತ್ತಿದೆ. ಸಾರ್ವಜನಿಕ ವಲಯದ ಸಂಸ್ಥೆ ಗಳನ್ನು ಖಾಸಗಿಕರಣಗೊಳಿಸಲಾಗುತ್ತಿದೆ. ಸಾರ್ವಜನಿಕ ಬ್ಯಾಂಕ್ ಗಳನ್ನೂ ಖಾಸಗಿ ಕರಣ ಗೊಳಿಸಲಾಗಿದೆ. ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ತಲುಪಿದ್ದು , ಹಕ್ಕುಗಳ ನ್ನು ಉಳಿಸಲು ಹೋರಾಟ ಸನ್ನಿಹಿತವಾಗಿದೆ ಎಂದರು.
ರಾಜ್ಯ ಅಧ್ಯಕ್ಷ ಕಮಲಾಧರನ್ ಅಧ್ಯಕ್ಷತೆ ವಹಿಸಿದ್ದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪಿಲ್, ಕೆ . ವಿ ಕೃಷ್ಣನ್ , ಟಿ. ಕೃಷ್ಣನ್ , ಸಿ . ಚಂದ್ರಬಾಬು ಮಾತನಾಡಿದರು.