ಮಾ.8 ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಉದ್ಘಾಟನೆ : ಯು.ಟಿ.ಖಾದರ್
ಮಂಗಳೂರು,ಮಾ.7: ಅಪಘಾತದಲ್ಲಿ ದೇಹ ಎರಡು ತುಂಡಾಗಿದ್ದರೂ ಅಂಗಾಂಗ ದಾನ ಮಾಡಿದ ಹರೀಶ್ ಅವರ ಹೆಸರಿನಲ್ಲಿ ಆರಂಭಿಸಲಾದ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಯನ್ನು ಮಾ.8 ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಅಪಘಾತದಲ್ಲಿ ತನ್ನ ಆರೋಗ್ಯದ ಬಗ್ಗೆ ಚಿಂತಿಸದೆ ಮಾನವೀಯತೆಯನ್ನು ತೋರಿಸಿದ ಹರೀಶ್ ಹೆಸರು ಶಾಸ್ವತವಾಗಿ ಉಳಿದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಗೆ ಹರೀಶ್ ಹೆಸರನ್ನಿಡಲಾಗಿದೆ. ರಾಜ್ಯದ ಉದ್ದಗಲದಲ್ಲೂ ಇನ್ನು ಮುಂದೆ ಅಪಘಾತವಾದಲ್ಲಿ ಗಾಯಾಳುವಿಗೆ ಚಿಕಿತ್ಸೆ ನಿಡುವ ನಿಟ್ಟಿನಲ್ಲಿ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಈ ಯೋಜನೆ ಏಷ್ಯಾದಲ್ಲಿಯೆ ಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಯಾಗುತ್ತಿದೆ ಎಂದರು. ಅಪಘಾತ ನಡೆದ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಸ್ಪತ್ರೆಯವರು ಸಾಪ್ಟ್‌ವೇರ್ ನಲ್ಲಿ ನೊಂದಾಯಿಸಿದ ತಕ್ಷಣ ಅವರಿಗೆ ನಂಬ ರನ್ನು ನಿಡಲಾಗುತ್ತದೆ. ಈ ನೋಂದಾವಣೆಗೆ ಗಾಯಳುವಿನ ಹೆಸರು ಬೇಕಾಗಿಲ್ಲ. ಗಾಯಾಳು ಹೆಣ್ಣೋ ಗಂಡೋ ಮತ್ತು ವಯಸ್ಸಿನ ಮಾಹಿತಿ ಇದ್ದರೆ ಸಾಕಾಗುತ್ತದೆ. ಈ ಯೋಜನೆಗೆ ರಾಜ್ಯದಲ್ಲಿ 200 ಆಸ್ಪತ್ರೆಗಳನ್ನು ನೋಂದಾಯಿಸಲಾಗಿದೆ. ಗಾಯಾಳುವನ್ನು ಈ ಯೋಜನೆಗೆ ನೋಂದಾಣಿಯಾಗದ ಆಸ್ಪತ್ರೆಗಳಲ್ಲಿಯೂ ದಾಖಲಿಸಬ ಹುದು.ನೋಂದಾವಣೆಯಾಗದ ಆಸ್ಪತ್ರೆಯಲ್ಲಿ ಈ ಯೋಜನೆಯಲ್ಲಿ ಅಪಘಾತಕ್ಕೊಳಗಾದ ಗಾಯಾಳುವಿಗೆ ಚಿಕಿತ್ಸೆ ನೀಡಿದ ಸಂದರ್ಭದಲ್ಲಿ ತನ್ನಿಂ ಾನಾಗಿಯೆ ಆಸ್ಪತ್ರೆ ಈ ಯೋಜನೆಗೆ ನೋಂದಾವಣಿಯಾಗುತ್ತದೆ. ಈ ಯೋಜನೆಗೆ ಆಸ್ಪತ್ರೆಗಳನ್ನು ಮೂರು ಹಂತದಲ್ಲಿ ಗುರುತಿಸಲಾಗಿದ್ದು ಲೆವೆಲ್ ಒಂದರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಬ ರುತ್ತದೆ . ಇವುಗಳಲ್ಲಿ ಚಿಕಿತ್ಸೆಗೆ ರೂ.25 ಸಾವಿರವನ್ನು ನೀಡಲಾಗುತ್ತದೆ. ಲೆವೆಲ್ 2 ರಲ್ಲಿ ಜಿಲ್ಲಾಮಟ್ಟದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಇದ್ದು ಇಲ್ಲಿ ಪಡೆಯುವ ಚಿಕಿತ್ಸೆಗೆ ರೂ 15ಸಾವಿರ ನೀಡಲಾಗುತ್ತದೆ,ಲೆವೆಲ್ 3 ರಲ್ಲಿ ತಾಲೂಕುಮಟ್ಟದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಬ ರಲಿದ್ದು ಇಲ್ಲಿ ಪಡೆಯುವ ಚಿಕಿತ್ಸೆಗೆ 5 ಸಾವಿರ ನೀಡಲಾಗುತ್ತದೆ. ಚಿಕಿತ್ಸೆ ಮುಗಿದ ನಂತರ ಆಸ್ಪತ್ರೆ ಬಿಲ್‌ಲ್ ಪರಿಶೀಲಿಸಿ ಹಣವನ್ನು ಆಸ್ಪತ್ರೆಗಳಿಗೆ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆಗಳು ಈ ಯೋಜನೆಯಡಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುವುದು. ಈ ಯೋಜನೆಗೆ ಈಗಾಗಲೆ 10 ಕೋಟಿ ಬಿಡುಗಡೆಗೊಂಡಿದ್ದು ಮುಂದಿನ ಬಜೆಟ್‌ನಲ್ಲಿ 75 ಕೋಟಿ ಹಣವನ್ನು ಮುಖ್ಯಮಂತ್ರಿಗಳು ಬೆಟ್‌ನಲ್ಲಿ ನೀಡಲಿದ್ದಾರೆ ಎಂದು ಹೇಳಿದರು.
ಈಗಾಗಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಕೇಂದ್ರದಲ್ಲಿ ಒಂದು ಮತ್ತು ಜಿಲ್ಲೆಯ ಒಂದು ತಾಲೂಕಿನಲ್ಲಿ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಾಗಿದೆ. ರಾಜ್ಯದ ಎಲ್ಲಾ ತಾಲೂಕುಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರವನ್ನು ತೆರಯಬೇಕೆನ್ನುವ ಚಿಂತನೆಯಿದೆ ಎಂದು ತಿಳಿಸಿದರು.
ವೆನ್ಲಾಕ್ ಆಸ್ಪತ್ರೆ ನಡೆಸಲು ಕೆಎಂಸಿಗೆ ಅವಕಾಶ ಕೊಟ್ಟರೆ ಕೈತಪ್ಪಲಿದೆ ಮೆಡಿಕಲ್ ಕಾಲೇಜು
ವೆನ್ಲಾಕ್ ಆಸ್ಪತ್ರೆಯ ನಿರ್ವಹಣೆಯನ್ನು ಕೆಎಂಸಿಗೆ ನೀಡುವ ಕುರಿತಂತೆ ಇರುವ ಪ್ರಸ್ತಾವದ ಬ ಗ್ಗೆ ಮಾತನಾಡಿದ ಆರೋಗ್ಯ ಸಚಿವರು ರಾಜ್ಯ ಸರಕಾರ ವೆನ್‌ಲಾಕ್ ಆಸ್ಪತ್ರೆ ಮತ್ತು ಬೆಂ ಳೂರಿನ ಬೌರಿಂಗ್ ಆಸ್ಪತ್ರೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದೆ. ಈಗಾಗಲೆ ಮಂಜೂರಾದ 6 ಮೆಡಿಕಲ್ ಕಾಲೇಜುಗಳ ಕಾರ್ಯ ಕೈಗೆತ್ತಿ ಮುಂದೆ ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜಿನ ಕಾರ್ಯ ತೆಗೆದುಕೊಳ್ಳಲಿದೆ. ಈಗ ವೆನ್ಲಾಕ್ ಆಸ್ಪತ್ರೆಯನ್ನು 30 ವರ್ಷಗಳ ಕಾಲ ಕೆಎಂಸಿ ನಿರ್ವಹಣೆಗೆ ನೀಡಲು ಮುಂದಾದಲ್ಲಿ ಮುಂದೆ ಮಂಗಳೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ತೊಡಕಾಗುವ ಸಾಧ್ಯತೆಯಿರುವುದರಿಂದ ಈ ಬಗ್ಗೆ ಪರೀಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಳೆದ ಹಲವು ವರ್ಷಗಳಿಂದ ವೆನ್ಲಾಕ್ ಆಸ್ಪತ್ರೆಯನ್ನು ನಿರ್ವಹಿಸುತ್ತಿರುವ ಕೆಎಂಸಿ ಉತ್ತಮ ಕೆಲಸ ಮಾಡಿದೆ. ಆದರೆ 30 ವರ್ಷಗಳ ಕಾಲ ಅವರ ನಿರ್ವಹಣೆಗೆ ನೀಡಿದ್ದಲ್ಲಿ ಸಮಸ್ಯೆಯಾಗಲಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಯೋಜನೆ ರೂಪಿಸಬೇಕಾಗಿದೆ ಎಂದು ಅವರು ಹೇಳಿದರು.