×
Ad

ಕಾರ್ಕಳ: ಯಾತ್ರಿಕರಿದ್ದ ಟಾಟಾ ಸುಮೋ ಪಲ್ಟಿ, 4 ಜನರಿಗೆ ಗಾಯ

Update: 2016-03-07 17:47 IST

ಕಾರ್ಕಳ: ಕಾರ್ಕಳದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟಾಟಾ ಸುಮೋ ವಾಹನವು ಹೊಸ್ಮಾರು ಬಳಿಯ ನೆಲ್ಲಿಕಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜಂಗಮರಹಳ್ಳಿಯ ಕೃಷ್ಣಪ್ಪ(64), ಚಿಟ್ಟಪ್ಪ(40), ಬೋರಮ್ಮ(50) ಹಾಗೂ ಲಿಂಗರಾಜು(28) ಎಂಬವರೇ ಗಾಯಗೊಂಡವರು. ಟಾಟಾ ಸುಮೋದಲ್ಲಿ ತುಮಕೂರಿನಿಂದ ಹೊರಟ ಇವರು ಸಿಗಂಧೂರು ದೇವಳಕ್ಕೆ ಭೇಟಿ ನೀಡಿ ಬಳಿಕ ಕೊಲ್ಲೂರು ಮಾರ್ಗವಾಗಿ ಕಾರ್ಕಳದ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಚಾಲಕನ ಅತ್ಯಂತ ವೇಗದ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News