ಕಾರ್ಕಳ : ರಿಕ್ಷಾ ಡಿಕ್ಕಿ, ಪಾದಾಚಾರಿ ಸಾವು
ಕಾರ್ಕಳ : ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ವ್ಯಕ್ತಿಯೊಬ್ಬರಿಗೆ ರಿಕ್ಷಾ ಡಿಕ್ಕಿಯಾದ ಪರಿಣಾಮ ಪಾದಾಚಾರಿ ರಸ್ತೆಯ ಬದಿಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸಾವನ್ನಪಿದ ಘಟನೆ ಸಂಜೆ ಕಾರ್ಕಳ ಮಾರ್ಕೆಟ್ ರಸ್ತೆಯ ಪ್ರಕಾಶ್ ಜ್ಯುವೆಲ್ಲರಿ ಬಳಿ ನಡೆದಿದೆ. ಸದಾಶಿವ ಆಚಾರ್ಯ(70) ಎಂಬವರು ತೀವೃವಾಗಿ ಗಾಯಗೊಂಡಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಸಾವನ್ನಪ್ಪಿದ್ದಾರೆ.
ಬಂಡೀಮಠದಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ರಿಕ್ಷಾ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಕಾರ್ಕಳ ಪುರಸ‘ೆಯ ಕಸ ಸಾಗಾಟ ವಾಹನದ ಚಾಲಕ ರವಿ ತನ್ನ ರಿಕ್ಷಾವನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ ಈ ಅಪಘಾತವೆಸಗಿರುವುದು ಜ್ಯುವೆಲ್ಲರಿ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.ಪ್ರಕಾಶ್ ಜ್ಯುವೆಲ್ಲರಿ ಮಾಲಕರ ತಂದೆ ಸದಾಶಿವ ಆಚಾರ್ಯ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗ ರಿಕ್ಷಾ ಚಾಲಕ ರವಿ ರಸ್ತೆಯ ತೀರಾ ಎಡ‘ಾಗಕ್ಕೆ ಬಂದು ಗುದ್ದಿ ಈ ಅಪಘಾತ ಎಸಗಿದ್ದಾನೆ. ರಿಕ್ಷಾ ಡಿಕ್ಕಿಯಾಗುತ್ತಿದ್ದಂತೆಯೇ ರಸ್ತೆಯ ಬದಿಯ ಚರಂಡಿಗೆ ಹಾಕಲಾಗಿದ್ದ ಹಾಸು ಕಲ್ಲಿಗೆ ಸದಾಶಿವ ಆಚಾರ್ಯರವರ ತಲೆ ಬಡಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು .ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.