×
Ad

ಮಲ್ಯಗೆ ಬರಬೇಕಿದ್ದ 515 ಕೋಟಿ ರೂ. ತಾತ್ಕಾಲಿಕ ಜಪ್ತಿಗೆ ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣ ಆದೇಶ

Update: 2016-03-07 17:58 IST

ಬೆಂಗಳೂರು, ಮಾ.7: ಮದ್ಯದ ದೊರೆ ವಿಜಯ ಮಲ್ಯಗೆ ಬರಬೇಕಿದ್ದ 515 ಕೋಟಿ ರೂ.ಗಳ ಜಪ್ತಿಗೆ ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣ ಇಂದು ಆದೇಶ ನೀಡಿದೆ.
 ಹಣ ಜಪ್ತಿಗೆ ಸಲ್ಲಿಸಲಾಗಿದ್ದ ಒಂದು ಅರ್ಜಿಯ ವಿಚಾರಣೆ ನಡೆಸಿದ ಸಿವಿಲ್ ಜಡ್ಜ್ ಸಿ.ಆರ್. ಬೆನಕನಹಳ್ಳಿ ಉಳಿದ ಅರ್ಜಿಯ ವಿಚಾರಣೆಯನ್ನು ಮಾರ್ಚ್ 28ಕ್ಕೆ ಮುಂದೂಡಿದರು.
 ಮಲ್ಯ ಯುಎಸ್‌ಎಲ್‌ನಿಂದ ನಿರ್ಗಮಿಸಲು 75 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದರು. ಈ ಹಣ ಜಪ್ತಿಗೆ ವಿವಿಧ ಬ್ಯಾಂಕುಗಳು ಅರ್ಜಿ ಸಲ್ಲಿಸಿದ್ದವು. 17 ಬ್ಯಾಂಕುಗಳ ಅರ್ಜಿಯನ್ನು ನ್ಯಾಯಾಧಿಕರಣ ಮಾನ್ಯ ಮಾಡಿದ್ದು, ಈ ಪೈಕಿ ಎಸ್‌ಬಿಐಗೆ ಮೊದಲ ಆದ್ಯತೆ ನೀಡಲಾಗಿದೆ. ಮಲ್ಯ ಬಂಧನ, ಪಾಸ್‌ಪೋರ್ಟ್ ಮುಟ್ಟುಗೋಲು, ಹಣ, ಆಸ್ತಿ ಜಪ್ತಿಗೆ ಬ್ಯಾಂಕುಗಳು 4 ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದವು. ಮಲ್ಯಗೆ ಹಣ ನೀಡದಂತೆ ಯುಎಸ್‌ಎಲ್‌ಗೆ ಹಾಗೂ ಹಣ ಪಡೆಯದಂತೆಯೂ ಮಲ್ಯಗೆ ಸಿವಿಲ್ ಜಡ್ಜ್ ಆದೇಶ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News