×
Ad

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಾಗೂ ನೂತನ ಸ್ವ ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ

Update: 2016-03-07 18:28 IST

ಭಟ್ಕಳ: ಸಂಜೀವಿನಿ ಸಮಾಜ ಸೇವಾ ಸಂಸ್ಥೆ, ತಾಲೂಕಾ ಮಹಿಳಾ ಸ್ವ ಸಹಾಯ ಸಂಘಗಳು, ತಾಲೂಕಾ ಪಂಚಾಯತ್, ಸಿಂಡಿಕೇಟ್ ಬ್ಯಾಂಕ್, ಕೆ.ವಿ.ಜಿ. ಬ್ಯಾಂಕ್, ಅರ್ಬನ್ ಬ್ಯಾಂಕ್, ರೋಟರಿಕ್ಲಬ್ ಹಾಗೂ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಇವುಗಳ ಸಂಯುಕ್ತಆಶ್ರಯದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಾಗೂ ನೂತನ ಸ್ವ ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ಮಾ.8ರಂದು ಮಧ್ಯಾಹ್ನ 2.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 ಕಾರ್ಯಕ್ರಮವನ್ನುಜಿ.ಪಂ. ಸದಸ್ಯೆ ಜಯಶ್ರೀ ಮೊಗೇರಉದ್ಘಾಟಿಸುವರು.ಸಹಾಯಕ ಸರಕಾರಿಅಭಿಯೋಜಕಿಇಂದಿರಾ ನಾಯ್ಕಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ಎಸ್.ಪಿ. ಡಾ. ಅನೂಪ್ ಶೆಟ್ಟಿ, ಆಲ್ಬರ್ಟಡಿಕೋಸ್ತ, ಸಿ.ಟಿ.ನಾಯ್ಕ, ಮಹಾಬಲೇಶ್ವರ ನಾಯ್ಕ, ಮೀನಾಕ್ಷಿ ನಾಯ್ಕ, ಜಯಲಕ್ಷ್ಮೀಗೊಂಡ, ಈಶ್ವರ ನಾಯ್ಕ, ರಾಮದಾಸ ಪ್ರಭು, ಶ್ರೀದೇವಿ ಎಂ. ಭಟ್ಟ, ಸೂರ್ಯನಾರಾಯಣರಾವ್, ಸುಮಾವತಿ ಶೆಟ್ಟಿ ಉಪಸ್ಥಿತರಿರುವರು ಎಂದು ತಿಳಿಸಲಾಗಿದೆ.ಸಹಾಯಕ ಕೃಷಿ ನಿರ್ದೇಶಕ ಜಿ.ಡಿ.ಮುರಗೋಡ, ಸಹಾಯಕತೋಟಗಾರಿಕಾ ನಿರ್ದೇಶಕಚೇತನ್ ನಾಯ್ಕ, ಹಿರಿಯಆರೋಗ್ಯಾಧಿಕಾರಿಈರಯ್ಯದೇವಡಿಗಇವರು ವಿಶೇಷ ಉಪನ್ಯಾಸ ನೀಡುವರುಎಂದೂ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News